ಕೊರೊನ ವೈರಸ್‍ನಿಂದ ಮಾರುಕಟ್ಟೆ ಸ್ಥಗಿತ : ಕಾಯಿಯ ಬಾರಕ್ಕೆ ಮುರಿದು ಬಿದ್ದ ಗಿಡಗಳು!!

ಪಾವಗಡ :       ಕಟಾವಿಗೆ ಬಂದಿರುವ ಬಾಳೆಗೆ ಕೊರೊನ ವೈರಸ್‍ನಿಂದ ಸ್ಥಗಿತವಾದ ಮಾರುಕಟ್ಟೆಯಿಂದ ಕಾಯಿಯ ಬಾರಕ್ಕೆ ಗಿಡಗಳೇ ಮುರಿದು ಬಿದ್ದಿರಿರುವ ಆಮಾನವೀಯ ಘಟನೆ ಬೆಳಕಿಗೆ ಬಂದಿದೆ.       ತಾಲೂಕಿನ ಕಣಿವೇನ ಹಳ್ಳಿ ಗ್ರಾಮದ ಬಳಿ ರೈತ ಅಂಜನೇಯಲು ಎಂಬುವವರು 6 ಎಕರೆ ಪ್ರದೇಶದಲ್ಲಿ 7500 ಬಾಳೆ ಗಿಡಗಳನ್ನು ಹಾಕಿದ್ದರು, ಕಟಾವಿಗೆ ಬಂದಿರುವ ಬಾಳೆಗೆ ವ್ಯಾಪಾರಸ್ಥರಿಲ್ಲದೆ ಮಾರುಕಟ್ಟೆ ಇಲ್ಲದೆ ಸ್ಥಗಿತವಾದ ಕಾರಣ ಸುಮಾರು 2 ಸಾವಿರಕ್ಕೂ ಹೆಚ್ಚು ಗಿಡಗಳು ಹಣ್ಣಿನ ಬಾರದಿಂದ ಮುರಿದು ಬಿದ್ದಿವೆ.       ಇದೇ ವೇಳೆ ರೈತ ಮುಖಂಡರಾದ ರಾಮಲಿಂಗರೆಡ್ಡಿ ಮಾತನಾಡಿ ಅಂಜನೇಯಲು ಎಂಬ ರೈತ 6 ಎಕರೆ ಭೂಮಿಯಲ್ಲಿ 7500 ಬಾಳೆ ಗಿಡಗಳನ್ನು ಬೆಳೆದಿದ್ದು, ಕಟಾವಿಗೆ ಬಂದಾ ಕಾಯಿಗೆ ಕೊರೊನ ವೈರಸ್ ಹಿನ್ನೆಲೆ ಮಾರುಕಟ್ಟೆ, ವ್ಯಾಪಾರ ವಹಿವಾಟು ನಿಂತ ಕಾರಣ ಬಾಳೆ ಮಾರಾಟವಾಗದೆ ಕಾಯಿಯ ಬಾರಕ್ಕೆ…

ಮುಂದೆ ಓದಿ...

ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!

ತುಮಕೂರು :       ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗಾ ಹೋಬಳಿ ದಾಸಲುಕುಂಟೆ ಗ್ರಾಮದ ನಿವಾಸಿ ಮಂಜುನಾಥ್ ಎಂಬ ರೈತನಿಂದ 15ಸಾವಿರ ರೂ.ಗಳ ಲಂಚದ ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಚನ್ನೇಗೌಡ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಹಿನ್ನೆಲೆ:       ದಾಸಲುಕುಂಟೆ ಗ್ರಾಮದ ಮಂಜುನಾಥ್ ಅವರ ತಾಯಿ ನಾಗರತ್ನಮ್ಮ ಅವರ ಹೆಸರಿಗೆ ಕ್ರಯವಾಗಿರುವ ದಾಸಲುಕುಂಟೆ ಗ್ರಾಮದ ಸರ್ವೇ ನಂ.34ರ ಎರಡು ಎಕರೆ 37 ಗುಂಟೆ ಜಮೀನಿನ ಪಹಣಿ ಮತ್ತು ಖಾತೆ ಬದಲಾವಣೆ ಮಾಡಿಸಿಕೊಡುವ ಸಲುವಾಗಿ ಗ್ರಾಮ ಲೆಕ್ಕಿಗ ಚನ್ನೇಗೌಡ 30ಸಾವಿರ ರೂ.ಗಳ ಹಣಕ್ಕೆ ಬೇಡಿಕೆ ಇಟ್ಟು ನಂತರ 15ಸಾವಿರ ರೂ.ಗಳಿಗೆ ಒಪ್ಪಿ ಮುಂಗಡವಾಗಿ 5ಸಾವಿರ ರೂ. ಹಣವನ್ನು ಪಡೆದುಕೊಂಡಿರುತ್ತಾನೆ.       ನಂತರ ಮಾರ್ಚ್ 20ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಸಾರ್ವಜನಿಕ ವಾಚನಾಲಯದಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಛೇರಿಯಲ್ಲಿ ಉಳಿದ ಲಂಚದ…

ಮುಂದೆ ಓದಿ...

ಕೋವಿಡ್-19 : ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳ ಸ್ವಚ್ಛತೆ ಕಾಪಾಡಲು ಸೂಚನೆ

ತುಮಕೂರು:       ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಲುವಾಗಿ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಮೆಸ್, ಬೇಕರಿ, ಟೀ/ಕಾಫಿ ಶಾಪ್, ಜ್ಯೂಸ್ ಸೆಂಟರ್, ನಂದಿನಿ ಮಿಲ್ಕ್ ಅಂಡ್ ಐಸ್ ಕ್ರೀಂ ಪಾರ್ಲರ್‍ಗಳ ಮಾಲೀಕರು ಕಡ್ಡಾಯವಾಗಿ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ.       ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಮೆಸ್, ಬೇಕರಿ ಮತ್ತಿತರೆ ಉದ್ದಿಮೆಗಳ ಮಾಲೀಕರು ತಾವು ನಡೆಸುತ್ತಿರುವ ಉದ್ದಿಮೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿದಿನ 30 ಗ್ರಾಂ ಬ್ಲಿಚಿಂಗ್ ಪೌಡರ್ ಅನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಶುಚಿಗೊಳಿಸಬೇಕು. ಬಂದ ಗ್ರಾಹಕರಿಗೆ ಉಪಹಾರ ಸೇವಿಸುವ ಮುನ್ನ ಕಡ್ಡಾಯವಾಗಿ ಹ್ಯಾಂಡ್‍ವಾಶ್/ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಒದಗಿಸಬೇಕು ಹಾಗೂ ಕುಡಿಯಲು ಬಿಸಿ ನೀರನ್ನು ನೀಡಬೇಕು. ಗ್ರಾಹಕರು ಉಪಹಾರ ಸೇವಿಸಿ ಹೋದ ನಂತರದ ಮೇಜು ಮತ್ತು…

ಮುಂದೆ ಓದಿ...