ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರಕ್ಕೆ ಪರಮೇಶ್ವರ್ ಒತ್ತಾಯ!

ಕೊರಟಗೆರೆ :       ಕೊರಟಗೆರೆ ಪಟ್ಟಣದ ಸಮೀಪ ಜಟ್ಟಿ ಅಗ್ರಹಾರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟವರಿಗೆ ಸರಕಾರ 5 ಲಕ್ಷ ರೂ.ಪರಿಹಾರ ಮೊತ್ತ ಘೋಷಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಒತ್ತಾಯಿಸಿದರು.       ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಪಘಾತದಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಧುಗಿರಿಯಿಂದ ತುಮಕೂರಿಗೆ ಹೊರಟ ಬಸ್ ಮಾರ್ಗ ಮಧ್ಯೆ ಜಟ್ಟಿ ಅಗ್ರಹಾರದಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿದ್ದು, 5 ಜನ ಸಾವನ್ನಪ್ಪಿದ್ದಾರೆ. 15 ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಕ್ಕೆ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಲಿ ಎಂದರು.       ಜೊತೆಗೆ, ಈ ಮಾರ್ಗದಲ್ಲಿ ಇದು ಎರಡನೇ ಅಪಘಾತವಾಗಿದೆ. ಬಸ್‍ಗಳ ವೇಗಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಆರ್‍ಟಿಒ ಹಾಗೂ ಪೆÇಲೀಸ್…

ಮುಂದೆ ಓದಿ...

ತುರುವೇಕೆರೆ : ಮಲ್ಲಾಘಟ್ಟ ಕೆರೆಗೆ ಬಿದ್ದು ಓರ್ವ ಸಾವು!

ತುರುವೇಕೆರೆ :       ವ್ಯಕ್ತಿಯೊಬ್ಬ ಮಲ್ಲಾಘಟ್ಟ ಕೆರೆಯಲ್ಲಿ ನೀರು ಮುಟ್ಟಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.        ಮೃತನು ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಗ್ರಾಮದ ನಿವಾಸಿ ಲಿಂಗಪ್ಪ (52) ಎಂದು ಗುರುತಿಸಲಾಗಿದೆ. ಮೃತ ಲಿಂಗಪ್ಪನಿಗೆ ಎರಡು ಗಂಡು, ಒಂದು ಹೆಣ್ಣು ಮಗು ಸಹ ಇದೆ. ಸೋಮವಾರ ಮಲ್ಲಾಘಟ್ಟ ಕೆರೆ ದಡದಲ್ಲಿರುವ ಗಂಗಾಧರೇಶ್ವರ ಸ್ವಾಮಿಯ ಪೂಜೆಗೆಂದು ಬಂದಿದ್ದು ಕೆರೆಯ ದಂಡೆ ತನ್ನ ಬಟ್ಟೆಗಳನ್ನು ಕಳಚಿಟ್ಟು ನೀರು ಮುಟ್ಟಲು ಹೋಗಿ ಕಾಲು ಜಾರಿ ಅಸುನೀಗಿದ್ದಾನೆ.       ಮೊನ್ನೆ 26ರ ಶನಿವಾರವಷ್ಟೆ ಮಲ್ಲಾಘಟ್ಟ ಕೆರೆ ಮೂಲಭೂತ ಸೌಕರ್ಯದ ಬಗ್ಗೆ ಹಾಗೂ ಕಾವಲುಗಾರ ನೇಮಕ ಪ್ರಜಾಪ್ರಗತಿಯಲ್ಲಿ ದಿನಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.ಅಗ್ನಿಶಾಮಕ ದಳದ ಸಿಬ್ಬಂದಿ, ಪೆÇಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ವಿಶಾಲವಾಗಿ ತುಂಬಿ ಹರಿಯುತ್ತಿರುವ ಕೆರೆಯಲ್ಲಿ ಮೃತನ ಶವ ಶೋಧನೆಗಾಗಿ ಹರಸಾಹಸ…

ಮುಂದೆ ಓದಿ...

ನ್ಯಾಯಾಲಯದಲ್ಲಿ ಬಾಕಿಯಿರುವ ದಲಿತ ಸಮುದಾಯಗಳ ಪ್ರಕರಣಗಳ ನಿಖರ ಮಾಹಿತಿ ನೀಡಲು ಡಿಸಿ ಸೂಚನೆ!

ತುಮಕೂರು :       ನ್ಯಾಯಾಲಯದಲ್ಲಿ ಬಾಕಿಯಿರುವ ದಲಿತ ಸಮುದಾಯದವರ ದೂರು ಪ್ರಕರಣಗಳ ನಿಖರ ಮಾಹಿತಿಯನ್ನು ಸಭೆಗೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾರ್ವಜನಿಕ ಕುಂದು ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಭೆಗೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಮುಂದಿನ ಸಭೆಯೊಳಗಾಗಿ ನಿಖರ ಮಾಹಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ನಿರ್ದೇಶನ ನೀಡಿದರು.       ಸಭೆಯಲ್ಲಿ “ದಲಿತರು ಒಳಗೆ ಪ್ರವೇಶಿಸಲು ಮುಕ್ತ ಅವಕಾಶವಿದೆ” ಎಂಬ ನಾಮಫಲಕವನ್ನು ಜಿಲ್ಲಾದ್ಯಂತ ಎಲ್ಲ ಮುಜರಾಯಿ ದೇವಾಲಯಗಳ ಮುಂದೆ ಪ್ರದರ್ಶಿಸಬೇಕೆಂದು ದಲಿತ ಮುಖಂಡರೊಬ್ಬರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳ ವ್ಯಾಪ್ತಿಗೆ ಬರುವ ಮುಜರಾಯಿ ದೇವಾಲಯಗಳಲ್ಲಿ ಈ ನಾಮಫಲಕವನ್ನು ಕಟ್ಟು…

ಮುಂದೆ ಓದಿ...

ಬಸ್ ಅಪಘಾತ : ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಮಾಧುಸ್ವಾಮಿ

ತುಮಕೂರು:       ಜಿಲ್ಲೆಯ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದ ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.       ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರದ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು, ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ನೀಡಿದ ಮಾಹಿತಿಯಂತೆ ಎದುರಿಗೆ ಬಂದ ಆಟೋರಿಕ್ಷಾವನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ತಲೆಕೆಳಗಾಗಿ ಬಿದ್ದದ್ದರಿಂದ ಈ ಅಪಘಾತ ಸಂಭವಿಸಿದೆ ಎಂದರು.       ವಾಹನಗಳು ವೇಗಮಿತಿ ಇಲ್ಲದೇ, ಖಾಸಗಿ…

ಮುಂದೆ ಓದಿ...

ಕೊರಟಗೆರೆ : ಭೀಕರ ಬಸ್ ದುರಂತಕ್ಕೆ ಐವರ ಬಲಿ!!

        ಆಟೋ ಚಾಲಕನ ಅಜಾಗರೂಕತೆ ಮತ್ತು ಚೆಲ್ಲಾಟದಿಂದ ಖಾಸಗಿ ಬಸ್ಸಿನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತವಾಗಿ ಬಸ್ಸಿನಲ್ಲಿದ್ದ ಐದು ಜನ ಮೃತ ಪಟ್ಟಿದ್ದಾರೆ.       ಇನ್ನುಳಿದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕೈಕಾಲು ಮುರಿದು ತೀವ್ರ ತರಹದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.       ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಜೆಟ್ಟಿಅಗ್ರಹಾರದ ಸರಕಾರಿ ಪ್ರೌಢಶಾಲೆಯ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಜಗನ್ನಾಥಪುರ ಕಡೆಯಿಂದ ಅಗ್ರಹಾರದ ಮುಖ್ಯರಸ್ತೆಗೆ ಸೇರಲು ಬಂದಂತಹ ಆಟೋ ವೇಗವಾಗಿ ಬರುತ್ತಿದ್ದ ವಿಜಯಲಕ್ಷ್ಮೀ ಎಂಬ ಖಾಸಗಿ ಬಸ್ಸನ್ನು ನೋಡಿಯೂ ಮುನ್ನುಗ್ಗಿದ್ದಾನೆ. ಅಪಘಾತ ತಡೆಯಲು ಯತ್ನಿಸಿದ ಬಸ್ಸು ನಿಯಂತ್ರಣಕ್ಕೆ ಬರದೇ ಪಲ್ಟಿ ಹೊಡೆದು ಅಪಘಾತವಾಗಿದೆ.        ಅಪಘಾತದಲ್ಲಿ ಕೊರಟಗೆರೆ ತಾಲೂಕಿನ ಗೇರಹಳ್ಳಿ ಗ್ರಾಮದ ಇಮ್ರಾನ್(18),…

ಮುಂದೆ ಓದಿ...