ಸ್ಪರ್ಧೆಗಳು ಮಕ್ಕಳ ಜ್ಞಾನ ವಿಕಾಸಕ್ಕೆ ಉತ್ತಮ ವೇದಿಕೆ

ಮಧುಗಿರಿ:       ಸ್ಪರ್ಧೆಗಳು ಮಕ್ಕಳ ಜ್ಞಾನ ವಿಕಾಸಕ್ಕೆ ಮತ್ತು ಸುಪ್ತ ಪ್ರತಿಭೆ ಹೊರ ಸೂಸಲು ಉತ್ತಮ ವೇದಿಕೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನರಸಿಂಹಮೂರ್ತಿ ತಿಳಿಸಿದರು. ಪಟ್ಟಣದ ನಿವೇದಿತಾ ಪಬ್ಲಿಕ್ ಶಾಲಾ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಆಯೋಜಿಸಿದ್ದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆ ಇಡೀ ಮಾನವ ಕುಲಕೋಟಿಗೆ ಮಾರ್ಗದರ್ಶನ, ಅನುಕಂಪ ಮತ್ತು ಪ್ರೀತಿ ತೋರುವುದೇ ನಿಜವಾದ ಧರ್ಮ ಎಂದು ಸಾರುತ್ತದೆ ಎಂದರು.       ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಡೆಯುವ ನಿತ್ಯೋತ್ಸವವಾಗಬೇಕು, ಈ ನಿಟ್ಟಿನಲ್ಲಿ ಮಹಿಳಾ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ವಾರಕ್ಕೊಮ್ಮೆ ಶಾಲಾ ಕಾಲೇಜುಗಳಲ್ಲಿ ನಾಡುನುಡಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆ ಹಾಗು ಉಪನ್ಯಾಸಗಳನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.…

ಮುಂದೆ ಓದಿ...

ಅನೈತಿಕ ಸಂಬಂಧಕ್ಕೆ ಹೆಂಡತಿಯಿಂದ ಗಂಡನ ಹತ್ಯೆ

 ಚಿಕ್ಕನಾಯಕನಹಳ್ಳಿ:        ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 11.11.2018 ರ ರಾತ್ರಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿ ಗ್ರಾಮದ ಗಂಗಾಧರಯ್ಯನನ್ನು ಯಾರೋ ಹತ್ಯೆ ಮಾಡಿ, ಶವವನ್ನು ಕಿಬ್ಬನಹಳ್ಳಿ ಹೋಬಳಿಯ ಅಯ್ಯನಪಾಳ್ಯದ ರಸ್ತೆಯ ಬದಿಯಲ್ಲಿ ತಂದುಹಾಕಿರುವ ಕುರಿತು ಮೃತ ಗಂಗಾಧರಯ್ಯನ ಅಣ್ಣನ ಮಗ ಸಂದೀಪ್ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಸಂಬಂಧ ಪ್ರಕರಣದ ತನಿಖೆಯನ್ನು ನಡೆಸಿದಾಗ, ಕೊಲೆಗೈದ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗಿದ್ದು, ಕೊಲೆಗೈದ ಆರೋಪಿಗಳು ಮೃತ ಗಂಗಾಧರಯ್ಯನವರ ಪತ್ನಿ ಶಾಂತಮ್ಮ, ಗುಬ್ಬಿ ತಾಲ್ಲೂಕು ಅಡಗೂರು ಎ.ಎನ್.ಮಂಜುನಾಥ್, ಅಡಗೂರಿನ ಎ.ಹೆಚ್.ಕೃಷ್ಣಪ್ಪ, ತುರುವೇಕೆರೆ ತಾಲ್ಲೂಕಿನ ರಾಮಡಿಹಳ್ಳಿಯ ವಿ.ಜ್ಞಾನೇಶ್ ಎಂಬುವವರು ಹತ್ಯೆಗೈದು ಕಿಬ್ಬನಹಳ್ಳಿ ಪೊಲೀಸ್ ಠಾಣಾ ಸರಹದ್ದಿಗೆ ತಂದು ಹಾಕಿದ್ದಾರೆಂದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಆಸ್ತಿ ವಿಚಾರ : ಇಬ್ಬರು ಹೆಂಡತಿಯರ ಗಂಡನ ಸಾವು       ಹತ್ಯೆಯಾದ ಗಂಗಾಧರಯ್ಯನಿಗೆ ಮೊದಲ ಪತ್ನಿ ಶಾಂತಮ್ಮಳಿದ್ದರೂ…

ಮುಂದೆ ಓದಿ...

ಬಾಳೆ ಜೊತೆ ಕಿರು ಬೆಳೆಗಳನ್ನು ಬೆಳೆದರೆ ಆದಾಯ ಹೆಚ್ಚು

ತುಮಕೂರು:       ರೈತರು ಸ್ವಾವಲಂಬಿಯಾಗುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಂಡು ಆದಾಯದಲ್ಲಿ ದ್ವಿಗುಣ ಪಡೆಯುವಲ್ಲಿ ಮುಂದಾಗಬೇಕು ಎಂದು ಐಡಿಎಫ್ ಸಂಸ್ಥೆಯ ಯೋಜನಾ ನಿರ್ದೇಶಕ ಮು.ಲ ಕೆಂಪೇಗೌಡ ತಿಳಿಸಿದರು.      ತಾಲ್ಲೂಕಿನ ಹೆಬ್ಬೂರು ಹೋಬಳಿ ಹೊನಸಿಗೆರೆ ಗೊಲ್ಲರಹಟ್ಟಿಯಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್ ಮತ್ತು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಸಂಯುಕ್ತಾಶ್ರಯದಲ್ಲಿ ಪ್ರಗತಿ ರೈತ ವೆಂಕಟೇಶ್ ಜಮೀನಿನಲ್ಲಿ ಏರ್ಪಡಿಸಿದ್ದ ಬಾಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಸ್ಥಳಿಯ ಸಂಪನ್ಮೂಲ ಬಳಸಿಕೊಂಡು ಮಣ್ಣು ಮತ್ತು ನೀರನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬ ರೈತರು ಬಾಳೆ ಬೆಳೆಯನ್ನು ಬೆಳೆಯುವಾಗ ಕಿರು ಬೆಳೆಗಳನ್ನು ಬೆಳೆದಾಗ ಬಾಳೆಯಿಂದ ಬರುವ ಸಮಯಕ್ಕೆ ಕಿರು ಬೆಳೆಯಿಂದ ಆದಾಯ ಬರುತ್ತದೆ ಎಂದರು.       ಜೀವನ ಉತ್ತೇಜನಾಧಿಕಾರಿ ಹರ್ಷಿತ ಮಾತನಾಡಿ ರೈತರು ಪ್ರಥಮ ಹಂತದಲ್ಲಿ ತಿಪ್ಪೆಯನ್ನ ರಕ್ಷಣೆ ಮಾಡಿಕೊಂಡು ಕೃಷಿ ಮಾಡುಲು ಮಂದಾಗಬೇಕು ಎಂದರು. ಹೊನಸಿಗೆರೆ…

ಮುಂದೆ ಓದಿ...

ಋಣಮುಕ್ತ ಕಾಯಿದೆ ಜಾರಿಗೆ ಒತ್ತಾಯ

ಹುಳಿಯಾರು:        ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಡಾ. ಎಂ ಎಸ್ ಸ್ವಾಮಿನಾಥನ್ ವರದಿ ಅನ್ವಯ ಬೆಂಬಲ ಬೆಲೆ ಕಾನೂನು ಹಾಗೂ ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರಿಗೆ ಸಾಲ ಮನ್ನಾ ಮಾಡುವ ಋಣಮುಕ್ತ ಕಾಯಿದೆ ಜಾರಿಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸುವಂತೆ ಒತ್ತಾಯಿಸಿ ರೈತ ಮುಕ್ತಿ ಮಹಾ ಪಾದಯಾತ್ರೆ ಮತ್ತು ಸಮಾವೇಶವನ್ನು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇದೇ ತಿಂಗಳ 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು.       ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕೆಂಕೆರೆ ಸತೀಶ್ ರೈತರ ಎಲ್ಲ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಸಮನ್ವಯ ಸಮಿತಿವತಿಯಿಂದ 29ರಂದು ಉತ್ತರ ಪ್ರದೇಶದಲ್ಲಿ ಪಾದಯಾತ್ರೆ ಪ್ರಾರಂಭಗೊಂಡು 30ರಂದು ದೆಹಲಿಯ ರಾಮಲೀಲಾ…

ಮುಂದೆ ಓದಿ...

ಸರ್ಕಾರಿ ಜಾಗದಲ್ಲಿರುವ ಗುಡಿಸಲನ್ನು ತೆರವುಗೊಳಿಸಲು 3 ದಿನಗಳ ಗಡುವು

 ತುಮಕೂರು:       ದಿಬ್ಬೂರಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಜಿ+2 ಮನೆಗಳು ಹಂಚಿಕೆಯಾಗಿರುವ ಫಲಾನುಭವಿಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಲ್ಲಿ 3 ದಿನಗಳೊಳಗಾಗಿ ತೆರವುಗೊಳಿಸಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.        ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಾದ ಮಂಡಿಪೇಟೆಯ ದೊಡ್ಡ ಚರಂಡಿ, ಶಾಂತಿ ಹೋಟೆಲ್ ಹಿಂಭಾಗ, ಮೀನು ಮಾರುಕಟ್ಟೆ ಪ್ರದೇಶ, ಬೆಳಗುಂಬ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಿಂಭಾಗ, ಮಾರಿಯಮ್ಮ ನಗರ ರಸ್ತೆ ಪಕ್ಕದ ಗುಡಿಸಲು ವಾಸಿಗಳು, ಮರಳೂರು ಜನತಾ ಕಾಲೋನಿ ಹೈಟೆನ್ಷನ್ ಕೆಳಗಡೆ ವಾಸಿಸುತ್ತಿರುವವರಿಗೆ ದಿಬ್ಬೂರಿನ ದೇವರಾಜು ಅರಸು ವಸತಿ ಬಡಾವಣೆಯಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹಾಲಿ ಸರ್ಕಾರಿ ಜಾಗದಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಫಲಾನುಭವಿಗಳು ಗುಡಿಸಲುಗಳನ್ನು ತೆರವು ಮಾಡಿ ದಿಬ್ಬೂರಿಗೆ ಸ್ಥಳಾಂತರಗೊಳ್ಳಲು ತಿಳಿಸಲಾಗಿತ್ತು. ಕೆಲವರು ಈವರೆಗೂ ಗುಡಿಸಲುಗಳನ್ನು ಖಾಲಿ…

ಮುಂದೆ ಓದಿ...

ಅನಂತ ಯಾನ ಅಂತ್ಯ

ಬೆಂಗಳೂರು:        ಸೋಮವಾರ ವಿಧಿವಶರಾದ ಬಿಜೆಪಿಯ ದಿಗ್ಗಜ ನಾಯಕ,ಕೇಂದ್ರ ಸಚಿವ ಎಚ್‌.ಎನ್‌.ಅನಂತ್‌ ಕುಮಾರ್‌ ಅವರ ಅಂತಿಮ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಗಣ್ಯಾತೀಗಣ್ಯರ ಸಮಕ್ಷಮ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ  ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.ಈ ವೇಳೆ ಪತ್ನಿ ತೇಜಸ್ವಿನಿ ಮತ್ತು ಪುತ್ರಿಯರಿಬ್ಬರು ತೀವ್ರ ಕಂಬನಿ ಮಿಡಿದರು.          ಅನಂತಕುಮಾರ್ ಸೋದರ ನಂದಕುಮಾರ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸೇನಾ ಸಿಬ್ಬಂದಿ ಸರ್ಕಾರಿ ಗೌರವ ಸಲ್ಲಿಸಿದರು. ಪಕ್ಷಾತೀತವಾಗಿ ಪ್ರಮುಖ ರಾಜಕೀಯ ನಾಯಕರು, ಸಚಿವರು, ಶಾಸಕರು ಮತ್ತು ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.       ಮುಂಜಾನೆ 7.30ಕ್ಕೆ ಬಸವನಗುಡಿಯಲ್ಲಿರುವ ಅನಂತಕುಮಾರ್ ಅವರ ಸ್ವಗೃಹ ‘ಸುಮೇರು’ವಿನಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ಕ್ಕೆ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಪಕ್ಷದ…

ಮುಂದೆ ಓದಿ...