ತುಮಕೂರು : 32 ಮಂದಿಗೆ ಕೋವಿಡ್-19 ಸೋಂಕು ; ಒಂದು ಸಾವು!!

ತುಮಕೂರು :      ಜಿಲ್ಲೆಯಲ್ಲಿಂದು 32 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 597 ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.      ಇಂದು ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿ 17, ಚಿಕ್ಕನಾಯಕನಹಳ್ಳಿ -6, ಮಧುಗಿರಿ-8, ಕೊರಟಗೆರೆ -1 ಸೇರಿ ಒಟ್ಟು 32 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.      ಈವರೆಗೆ 213 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 367 ಸಕ್ರಿಯ ಪ್ರಕರಣಗಳಿದ್ದು, ಇಂದು 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.      ಈವರೆಗೆ 17 ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮುಂದೆ ಓದಿ...

ಅನಾವಶ್ಯಕವಾಗಿ ಓಡಾಡುವವರಿಗೆ ಕಡ್ಡಾಯ ಕ್ವಾರಂಟೈನ್!

ಮಧುಗಿರಿ:       ಹೋಂ ಕ್ವಾರಂಟೈನ್‍ನಲ್ಲಿರುವವರು ಸಮುದಾಯದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದರೆ, ಅಂತಹವರನ್ನು ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಪತ್ತೆ ಹಚ್ಚಿ ಅವರುಗಳ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಧುಗಿರಿ ತಾಲೂಕಿನ ಕೋವಿಡ್ 19 ನಿಯಂತ್ರಣದ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಸೋಕಿತ ವ್ಯಕ್ತಿಯ ಕೋವಿಡ್ ವರದಿ ಬಂದ ನಂತರವಷ್ಟೇ ಮನೆಯಿಂದ ಹೊರ ಬರಬೇಕು, ಅಂತಹವರನ್ನು ಸ್ಥಲೀಯ ಆಡಳಿತದವರು ನಿಗಾವಹಿಸಬೇಕು ಇಲ್ಲವಾದರೆ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟುವುದು ಕಷ್ಟಕರವಾಗುತ್ತದೆ. ಕಂಟೈನ್ಮೆಂಟ್ ವಲಯದಲ್ಲಿನ ಎಲ್ಲರ ಪರೀಕ್ಷಾ ವರದಿ ಬಂದ ನಂತರವಷ್ಟೆ ತೆರವುಗೊಳಿಸಬೇಕು.       ಕೋವಿಡ್-19 ಗೆ ಸಂಬಂದಿಸಿದಂತೆ ಜಿಲ್ಲೆಗೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ತುರ್ತಾಗಿ ಆಂಟಿ ರ್ಯಾಪಿಡ್ ಕಿಟ್‍ಗಳು ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಕಿಟ್‍ಗಳಿಗಾಗಿ…

ಮುಂದೆ ಓದಿ...

ತಹಸೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ : ಸಿ.ಬಿ.ಐ ತನಿಖೆಗೆ ಆಗ್ರಹ!!

ಮಧುಗಿರಿ:       ಕೋಲಾರ ಜಿಲ್ಲೆ ಬಂಗಾರ ಪೇಟೆ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ.ಚಂದ್ರಮೌಳೇಶ್ವರ ರವರ ಹತ್ಯೆಯ ಬಗ್ಗೆ ಸೂಕ್ತ ಸಿ.ಬಿ.ಐ ತನಿಖೆ ನಡೆಸುವ ಅಗತ್ಯ ಇದೆ ಎಂದು ಮಧುಗಿರಿ ತಾಲ್ಲೂಕು ಯಾದವ ನೌಕರರ ಸಂಘ ಹಾಗೂ ಮಧುಗಿರಿ ತಾಲ್ಲೂಕು ಯಾದವ ಸಂಘ ಒತ್ತಾಯಿಸಿವೆ.       ಬಿ.ಕೆ.ಚಂದ್ರಮೌಳೇಶ್ವರವರ ತಾಯಿಯವರ ತವರೂರು ಮಧುಗಿರಿ ತಾಲ್ಲೂಕು ಕಸಬಾ ಮರುವೇಕೆರೆ ಆಗಿದ್ದು ಹಾಗೂ ಮಧುಗಿರಿ ಗಾಂಧಿ ಎಂ.ಪುಟ್ಟತಿಮ್ಮಯ್ಯ ರವರ ಸೋದರಳಿಯನವರಾಗಿದ್ದು ಸರಳ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರ ಪ್ರಾಮಾಣಿಕತೆಯನ್ನು ಕೋಲಾರ ಜನತೆ ಕೊಂಡಾಡಿದ್ದು ಇವರು ಜಮೀನಿನ ವಿವಾದ ಬಗ್ಗೆ ಖುದ್ದು ಹಾಜರಾಗಿ ಪರಿಶೀಲಿಸುವಾಗ ಪೊಲೀಸರ ಸಮ್ಮುಖದಲ್ಲಿ ವೆಂಕಟಾಚಲ ಎನ್ನುವ ವ್ಯಕ್ತಿ ಯಾವುದೇ ಕಾರಣವಿಲ್ಲದೇ ಚೂರಿಯಿಂದ ತಹಸೀಲ್ದಾರ್‍ರಿಗೆ ಇರಿದಿರುತ್ತಾರೆ. ಈ ಕೊಲೆ ಕೆಲವು ಅನುಮಾನಗಳಿಗೆ ಆಸ್ಪದವಾಗಿರುತ್ತದೆ. ಆದುದರಿಂದ ಜರೂರಾಗಿ ಸಿ.ಬಿ.ಐ ತನಿಖೆಗೆ ಒಳವಡಿಸುವುದರ ಮೂಲಕ ಅನುಕೂಲಕಲ್ಪಿಸಿಕೊಟ್ಟು ಮೃತರ…

ಮುಂದೆ ಓದಿ...

ಕೊರೊನಾ ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಕ್ರಿಯ : ಸಚಿವ

ಪಾವಗಡ:       ಕೊರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಟ್ರಿಯವಾಗಿದೆ. ನೀವು ನಿಮ್ಮ ಕೆಲಸಕ್ಕೆ ನಾಲಾಯಕ್, ನಿಮಗೆ ಕೆಲಸ ಮಾಡುವ ಮನಸ್ಸು ಇಲ್ಲದ ಕಾರಣದಿಂದ ತಾಲೂಕಿ ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ ಇಂತಹ ದುರ್ಘಟನೆಗೆ ನೇರವಾಗಿ ನೀವುಗಳೇ ಕಾರಣವೆಂದು ತಾಲೂಕು ಆಡಳಿತದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕೆಂಡಕಾರಿದರು.       ಪಾವಗಡ ಪಟ್ಟಣದ ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹ್ಮ ಸ್ವಾಮಿ ದೇವಾಲಯದ ಬಳಿಯ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದ ಅವರು, ತಹಶೀಲ್ದರ್, ತಾಪಂ ಇಒ ಹಾಗೂ ಪೊಲೀಸ್ ಇಲಾಖೆಯನ್ನ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಇದೇ ರೀತಿ ಮುಂದೆ ತಲೆದಂಡ ತಪ್ಪಿದಲ್ಲ ಉಷಾರ್ ಎಂದು ಎಚ್ಚರಿಕೆ ನೀಡಿದರು.       ಪಾವಗಡ ಒಂದು…

ಮುಂದೆ ಓದಿ...