ತಾಪಂ ಅಧ್ಯಕ್ಷಗಾದಿಗೆ ಕವಿತಾ ರಮೇಶ್ : ವಿಪ್ ಜಾರಿ!!

ತುಮಕೂರು :      ತುಮಕೂರು ತಾಲ್ಲೂಕು ‌ಪಂಚಾಯ್ತಿಯ ಅಧ್ಯಕ್ಷರನ್ನಾಗಿ ಕವಿತ ರಮೇಶ್‌ ರವರನ್ನು ಆಯ್ಕೆ ಮಾಡಿ ವಿಪ್ ಜಾರಿ ಮಾಡಲಾಗಿದೆ.       ತುಮಕೂರು ತಾಲ್ಲೂಕು ‌ಪಂಚಾಯ್ತಿಯ ಅಧ್ಯಕ್ಷರರ ಚುನಾವಣೆಯ ಕುರಿತು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಯ‌ ಮಾಜಿ ಶಾಸಕ ಹಾಲಿ‌ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.       ಸಭೆಯಲ್ಲಿ ಅರಕೆರೆ‌ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ‌ಕವಿತ ರಮೇಶ್‌ ರವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲು ಎಲ್ಲಾ ತಾಲ್ಲೂಕು ಪಂಚಾಯತ್ ಸದಸ್ಯರು ಸರ್ವಾನುಮತದಿಂದ ನಿರ್ಧಾರ ಕೈಗೊಂಡರು.  ಕವಿತ ರಮೇಶ್ ರವರು ಬಿಜೆಪಿ ಪಕ್ಷದ ಅಧಿಕೃತ ‌ ಅಭ್ಯರ್ಥಿ ಎಂದು ಘೋಷಿಸಿದರು.        ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ‌ಕಟೀಲ್ ರವರ ಆದೇಶದಂತೆ ಪಕ್ಷದ ಎಲ್ಲಾ…

ಮುಂದೆ ಓದಿ...

 ಚಿಕ್ಕನಾಯಕನಹಳ್ಳಿ: ಒಂದೇ ದಿನ 17ಪ್ರಕರಣ ಧೃಡ, ಆತಂಕದಲ್ಲಿ ಜನತೆ!!

 ಚಿಕ್ಕನಾಯಕನಹಳ್ಳಿ:       ಇದುವರೆಗೂ ತಾಲ್ಲೂಕಿನಾದ್ಯಂತ 12 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದು ಬುಧವಾರ ಒಂದೇ ದಿನದಲ್ಲಿ ಮತ್ತೆ 17 ಪ್ರಕರಣಗಳು ಧೃಡಪಟ್ಟಿದ್ದು ಒಟ್ಟಾರೆ ಕೊರೊನಾ ಸೋಂಕಿತರ ಪ್ರಮಾಣ 29 ಕ್ಕೇರಿದಂತಾಗಿದೆ.       ಬುಧವಾರ ತಾಲ್ಲೂಕಿಗೆ ಮೊದಲ ಕರಾಳದಿನವೆನಿಸಿದ್ದು ಒಂದೇ ದಿನದಲ್ಲಿ 17 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಪಟ್ಟಣದ ಸಮೀಪದ ಕಾಡೇನಹಳ್ಳಿಯಲ್ಲಿ ಆರು ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು ಈ ಗ್ರಾಮದಲ್ಲಿ ಒಟ್ಟಾರೆ 9 ಮಂದಿಗೆ ಸೋಂಕು ತಗುಲಿದಂತಾಗಿದೆ. ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ 8 ಮಂದಿಗೆ ಸೋಂಕು ಧೃಡಪಟ್ಟಿದ್ದು ಇಲ್ಲಿ ಒಟ್ಟು ಸೋಂಕಿತರ ಪ್ರಮಾಣ 9ಕ್ಕೆರಿದೆ. ಸಮೀಪದ ಬುಳ್ಳೇನಹಳ್ಳಿಯಲ್ಲಿ ಒಂದು, ಆಶ್ರೀಹಾಲ್ ಗ್ರಾಮದಲ್ಲಿ ಒಬ್ಬರು ಹಾಗೂ ಪಟ್ಟಣದ ದೇವಾಂಗಬೀದಿಯ ಮಹಿಳೆಯೊಬ್ಬರಿಗೆ ಸೋಂಕು ಧೃಡಪಟ್ಟಿದೆ.       ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಗಲಾಟೆ: ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಈ ಹಿಂದೆ ಯುವಕನೊಬ್ಬನಿಗೆ ಸೋಂಕು…

ಮುಂದೆ ಓದಿ...

ಪೇದೆಗೆ ಕೊರೊನಾ ; ತಿಪಟೂರು ಪೊಲೀಸ್ ಠಾಣೆ ಸೀಲ್‌ ಡೌನ್!!

ತಿಪಟೂರು :       ಪೇದೆಗೆ ಕೊರೊನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ತಿಪಟೂರು ಪೊಲೀಸ್ ಠಾಣೆ ಸೀಲ್‌ ಡೌನ್ ಮಾಡಲಾಗಿದೆ.       ತಿಪಟೂರು ಪೊಲೀಸ್ ಠಾಣೆಯಲ್ಲಿ ಓರ್ವ ಮುಖ್ಯಪೇದೆಗೆ ಕೊರೋನಾ ಸೋಂಕು ತಗುಲಿದ್ದು, ನಗರ ಪೊಲೀಸ್ ಠಾಣೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ.        ಪೊಲೀಸರು ಸೋಂಕಿಗೆ ಒಳಗಾಗುತ್ತಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.  

ಮುಂದೆ ಓದಿ...

ತುಮಕೂರು : ಅಕ್ಕನನ್ನು ಚುಡಾಯಿಸಿದವನ ಕೊಲೆ ಮಾಡಿದ ತಮ್ಮ!!

ತುಮಕೂರು :       ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಹಾಡುಹಗಲೇ ತಮ್ಮ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ ನಡೆದಿದೆ.       ದಾದಾಪೀರ್(55) ಕೊಲೆಯಾಗಿದ್ದು, ಮಧುಕುಮಾರ್  ಕೊಲೆಗೈದ  ಆರೋಪಿ. ಘಟನೆಯ ವಿವರ:       ಆರೋಪಿ ಮಧುಕುಮಾರ್ ಎಂಬಾತನ ಅಕ್ಕ ಲಕ್ಷ್ಮಿ ನಗರದ ಚರ್ಚ್ ವೃತ್ತದ ಬಳಿ ಕ್ಯಾಂಟೀನ್ ನಡೆಸುತ್ತಿದ್ದು, ಇಂದು ಮಧ್ಯಾಹ್ನ ಅಲ್ಲಿಗೆ ಬಂದ ದಾದಾಪೀರ್ ಬಿಸ್ಕೆಟ್ ಪ್ಯಾಕೆಟ್ ಹೇಳಿದ್ದಾನೆ. ಲಕ್ಷ್ಮಿಯವರು ಹಣ ಕೇಳಿದ್ದಾರೆ, ನಾನೇನು ದುಡ್ಡು ಪ್ರಿಂಟ್ ಮಾಡುತ್ತೇನೆಯೇ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾನೆ ದಾದಾಪೀರ್. ಮಾತ್ರವಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.      ಅಲ್ಲೇ ಕುಳಿತು ಟೀ ಕುಡಿಯುತ್ತಿದ್ದ ತಮ್ಮ ಮದು ದಾದಾಪೀರ್ ಗೆ ಸರಿಯಾಗಿ ಮಾತನಾಡುವಂತೆ ಹೇಳಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸ್ಥಳೀಯರು ಆ ಜಗಳವನ್ನು ಬಿಡಿಸಿ…

ಮುಂದೆ ಓದಿ...

ತುಮಕೂರಿನಲ್ಲಿ ಒಂದೇ ದಿನ 27 ಮಂದಿಗೆ ಕೊರೊನಾ ಪಾಸಿಟಿವ್​..!

ತುಮಕೂರು:        ಜಿಲ್ಲೆಯಲ್ಲಿ ಬುಧವಾರ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ.       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಈ ಕುರಿತು ಮಾಹಿತಿ ನೀಡಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5, ತಿಪಟೂರು 3, ತುಮಕೂರಿನಲ್ಲಿ 2 ಪ್ರಕರಣ ಪತ್ತೆಯಾಗಿದೆ. ಚಿಕ್ಕನಾಯಕನಹಳ್ಳಿ – 16:       ಚಿಕ್ಕನಾಯಕನಹಳ್ಳಿ ತಾಲೂಕಿನ ವಿಭಾಗದಲ್ಲಿ 38 ವರ್ಷ ಮತ್ತು 15 ವರ್ಷದ ಹೆಣ್ಣು, ಗೋಡೆ ಕೆರೆಯ 22 ವರ್ಷದ ಗಂಡು, 45 ವರ್ಷದ ಹೆಣ್ಣು, 50 ವರ್ಷದ ಗಂಡು, 70 ವರ್ಷದ ಹೆಣ್ಣು, 47 ವರ್ಷದ ಗಂಡು, 32 ವರ್ಷದ ಹೆಣ್ಣು, 18 ವರ್ಷದ ಹೆಣ್ಣು, ಹೆಸರಳ್ಳಿಯ 5 ವರ್ಷದ ಹೆಣ್ಣು, ಕಾಡೇನಹಳ್ಳಿಯ…

ಮುಂದೆ ಓದಿ...