ಮಧುಗಿರಿ : 4 ತಿಂಗಳ ಮಗು ಸೇರಿ ನಾಲ್ವರಿಗೆ ಕೊರೊನಾ!!

ಮಧುಗಿರಿ :       ತಾಲ್ಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ಕೂಡ ನಾಲ್ಕು ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ನಾಲ್ಕು ತಿಂಗಳ ಮಗುವಿಗೂ ಕೂಡ ಕರೋನಾ ವೈರಸ್ ಸೋಂಕು ತಗಲಿದೆ.       ತಾಲ್ಲೂಕಿನ ಇಂದಿರಾ ಗ್ರಾಮದಲ್ಲಿದ್ದ ತಮಿಳುನಾಡಿನಿಂದ ಆಗಮಿಸಿದ್ದ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು .ಈ ಕುಟುಂಬದ ನಾಲ್ಕು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ. ಕೆರೆಗಳಪಾಳ್ಯದ ಮೂವತ್ತಾರು ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ .ಕಡಗತ್ತೂರು ಗ್ರಾಮದಲ್ಲಿ ಸೌದಿ ಅರೇಬಿಯದಿಂದ ಆಗಮಿಸಿದಂತ ವ್ಯಕ್ತಿಗೆ ಸೋಂಕು ಧೃಢವಾಗಿದ್ದು.‌ ಐ.ಡಿ.ಹಳ್ಳಿ ಹೋಬಳಿಯ ಗೂಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕರೋನಾ ಸೋಂಕು ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.ಇದರಲ್ಲಿ ಕೆರೆಗಳ ಪಾಳ್ಯ ವ್ಯಕ್ತಿಯ ಪ್ರವಾಸ ಮಾಹಿತಿ ತಿಳಿದುಬಂದಿರುವುದಿಲ್ಲ. ಉಳಿದ ಮೂರು ಪ್ರಕರಣಗಳ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು.

ಮುಂದೆ ಓದಿ...

ಗ್ರಾ.ಪಂ. ಕಚೇರಿ ಸ್ಥಳಾಂತರ : ಗ್ರಾಮಸ್ಥರ ಪ್ರತಿಭಟನೆ!!

ಮಧುಗಿರಿ :       ಗ್ರಾ. ಪಂ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಲಗೇಜ್ ಆಟೋದಲ್ಲಿ ಪೀಟೋಪಕರಣಗಳು ಮತ್ತು ಕಡತಗಳನ್ನು ತುಂಬಿಕೊಂಡು ಹೊರಡುವ ವೇಳೆ ಗ್ರಾಮಸ್ಥರು ತಡೆಯೊಡ್ಡಿದ ಪರಿಣಾಮ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ದಿನ ಪೂರ್ತಿ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.        ಗ್ರಾಮದಲ್ಲಿರುವ ಗ್ರಾ.ಪಂ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಗ್ರಾಮದಲ್ಲೇ ಉಳಿಯಲಿ ಎಂದು ಪ್ರತಿಭಟನಾಕಾರರು ಶಾಸಕ ಎಂ.ವಿ.ವಿರಭದ್ರಯ್ಯನವರಿಗೆ ಮನವಿ ಮಾಡಿದರು. ಆಗ ಶಾಸಕರು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ವಿರೋಧವಾಗಿ ಸ್ಥಳಾಂತರ ಮಾಡುವುದು ಬೇಡ ಎಂದು ಕಚೇರಿಯ ಮುಂಭಾಗ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಒಪ್ಪದ ಆಡಳಿತ ಮಂಡಳಿ ಸದಸ್ಯರು ಜುಲೈ 1 ಕ್ಕೆ ನಮ್ಮ ಅಧಿಕಾರವಧಿ ಕೊನೆಗೊಳ್ಳಲಿದ್ದು, ಕಚೇರಿ ಸ್ಥಳಾಂತರಿಸಿ ಇಲ್ಲಿ ಸಭೆ ನಡೆಸಬೇಕೆಂದು ಪಟ್ಟು ಹಿಡಿದಾಗ ಶಾಸಕರು ಕಚೇರಿಯ…

ಮುಂದೆ ಓದಿ...

SSLC : ವಿಜ್ಞಾನ ಪರೀಕ್ಷೆಗೆ 33,130 ವಿದ್ಯಾರ್ಥಿಗಳು ಹಾಜರ್!!

ತುಮಕೂರು:       ತುಮಕೂರು(ದ) ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ವಿಜ್ಞಾನ ವಿಷಯ ಪರೀಕ್ಷೆಗೆ ನೋಂದಣಿಯಾಗಿರುವ 33781 ವಿದ್ಯಾರ್ಥಿಗಳ ಪೈಕಿ 33130 ವಿದ್ಯಾರ್ಥಿಗಳು ಹಾಜರಾಗಿದ್ದು, 651 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ತುಮಕೂರು(ದ):       ವಿಜ್ಞಾನ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿಯಾಗಿರುವ 20976 ವಿದ್ಯಾರ್ಥಿಗಳ ಪೈಕಿ 20792 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 184 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮಧುಗಿರಿ:       ವಿಜ್ಞಾನ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿಯಾಗಿರುವ 12805 ವಿದ್ಯಾರ್ಥಿಗಳ ಪೈಕಿ 12338 ವಿದ್ಯಾರ್ಥಿಗಳು ಹಾಜರಾಗಿದ್ದು, 467 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 8 ವಿದ್ಯಾರ್ಥಿಗಳು ನೆರೆ ರಾಜ್ಯಗಳಿಂದ, 21 ವಿದ್ಯಾರ್ಥಿಗಳು ಕಂಟೈನ್ಮೆಂಟ್ ಪ್ರದೇಶಗಳಿಂದ, ಅನಾರೋಗ್ಯದಿಂದ ವಿಶೇಷ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಮೊದಲ ಬಾರಿಗೆ 12280…

ಮುಂದೆ ಓದಿ...

ಗುಬ್ಬಿ : ಓಡಾಟಕ್ಕೂ ಯೋಗ್ಯವಲ್ಲದಂತಾದ ಸೀಲ್‍ಡೌನ್ ಗ್ರಾಮ!!

ಗುಬ್ಬಿ:        ತಾಲ್ಲೂಕಿನ ಕಸಬ ಹೋಬಳಿ ಜವರೇಗೌಡನಪಾಳ್ಯ ಗ್ರಾಮದಲ್ಲಿನ ಕಚ್ಚಾ ರಸ್ತೆ ಮಳೆ ಬಂದು ಸಂಪೂರ್ಣ ಓಡಾಟಕ್ಕೂ ಯೋಗ್ಯವಲ್ಲದಂತಾಗಿ ಗ್ರಾಮವೇ ಸೀಲ್‍ಡೌನ್ ಆಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.       ಇಡೀ ಗ್ರಾಮದಲ್ಲಿ ಎಲ್ಲರ ಮನೆಯ ಸಂಪರ್ಕಿಸುವ 600 ಮೀಟರ್ ಮುಖ್ಯರಸ್ತೆ ಸೇರಿದಂತೆ ನಾಲ್ಕು ಗಲ್ಲಿ ರಸ್ತೆಗಳು ಸಂಪೂರ್ಣ ಕಚ್ಚಾ ರಸ್ತೆಯಾಗಿದೆ. 12 ಅಡಿಗಳ ಈ ರಸ್ತೆ ಮಣ್ಣಿನಿಂದ ಕೂಡಿ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಮಳೆ ಬಂದರೆ ಯಾರೊಬ್ಬರು ಓಡಾಡಲು ಆಗದ ದುಸ್ಥಿತಿಯಲ್ಲಿದೆ. ಕಳೆದ 20 ವರ್ಷದಿಂದ ಇದೇ ಅವ್ಯವಸ್ಥೆ ಅನುಭವಿಸಿರುವ ಗ್ರಾಮಸ್ಥರು ಈಗಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನರಸಿಂಹಮೂರ್ತಿ ಆರೋಪಿಸಿದ್ದಾರೆ.       ರೈತರು ಸಾಕಿರುವ ರಾಸುಗಳು ಸಹ ಈ ರಸ್ತೆಗೆ ಹೆಜ್ಜೆ ಇಡಲು ಹಿಂಜರಿಯುತ್ತಿವೆ. ಗುಂಡಿ ಬಿದ್ದ ಸಂದರ್ಭದಲ್ಲಿ ಸ್ಥಳೀಯರೇ ಮಣ್ಣು ತುಂಬಿಸಿಕೊಂಡು…

ಮುಂದೆ ಓದಿ...