ತಾ.ಪಂ.ಸಿಬ್ಬಂದಿಗೆ ಕೊರೊನಾ : ಮಾಹಿತಿಯಿದ್ದರೂ ಸಭೆ ನಡೆಸಿದ ಶಾಸಕ ಗೌರಿಶಂಕರ್

ತುಮಕೂರು:       ತುಮಕೂರು ತಾಲ್ಲೂಕು ಪಂಚಾಯಿತಿ ಮಹಿಳಾ ಸಿಬ್ಬಂದಿ ಮಂಜುಳಾ ಕರೋನಾ ಪಾಸಿಟಿವ್ ಧೃಡ ಪಟ್ಟಿದೆ. ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಮತ್ತು ಕಚೇರಿಗೆ ಹಾಜರಾಗಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ವಾಸವಿರುವ ಸೋಂಕಿತ ಮಂಜುಳಾರವರು ಪ್ರತಿನಿತ್ಯ ಕೆಸ್ತೂರು ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ರಮೇಶ್ ಮತ್ತು ಸ್ವಾಂದೇನಹಳ್ಳಿ ಪಿಡಿಓ ಕೃಷ್ಣಮೂರ್ತಿ ರವರ ಜೊತೆಯಲ್ಲಿ ಬೆಂಗಳೂರಿನಿಂದ ಕೃಷ್ಣಮೂರ್ತಿ ಅವರ ಕಾರಿನಲ್ಲಿ ಬಂದು ಹೋಗುತ್ತಿರುತ್ತಾರೆ. ಸ್ವಾಂದೇನಹಳ್ಳಿ ಪಿಡಿಒ ಕೃಷ್ಣಮೂರ್ತಿ ಮಾಹಿತಿ ತಿಳಿದ ಮೇಲೆ ಕಚೇರಿ ಹಾಜರಾಗದೆ ರಜೆ ಪಡೆದಿರುವ ವಿಚಾರ ಕೇಳಿ ಬಂದಿರುತ್ತದೆ.       ಕೃಷ್ಣಮೂರ್ತಿ ರಮೇಶ್ ಮಂಜುಳಾ ರವರು ಪ್ರತಿನಿತ್ಯ ಕೃಷ್ಣಮೂರ್ತಿ ಕಾರಿನಲ್ಲಿ ಬೆಂಗಳೂರು ನಿಂದ ಬರುತ್ತಿದ್ದು ಕೆಸ್ತೂರು ಮತ್ತು ಸ್ವಾಂದೇನಹಳ್ಳಿ ಪಂಚಾಯತ್ ಸಿಬ್ಬಂದಿಗಳು ಕೂಡ ಆತಂಕದಲ್ಲಿದ್ದಾರೆ. ಅದೇ ಮಂಜುಳಾ ರವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿರುವ ವಿಚಾರ ತಾಲೂಕು…

ಮುಂದೆ ಓದಿ...

ಮಧುಗಿರಿಯ ಡಿಎಸ್ಪಿ ಕಚೇರಿ ಸೀಲ್‍ಡೌನ್!!

ಮಧುಗಿರಿ:       ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್‍ನಿಂದ ಬಂಧಿತನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಕರೆತಂದ ಕಾರಣ ಕೊಡಗೇನಹಳ್ಳಿ ಪೊಲೀಸ್ ಠಾಣೆ ಮತ್ತು ಮಧುಗಿರಿಯಲ್ಲಿರುವ ಡಿಎಸ್ಪಿ ಕಚೇರಿಯನ್ನು ಶುಕ್ರವಾರ ಸಿಲ್ ಡೌನ್ ಮಾಡಲಾಗಿದೆ.       ಮಧುಗಿರಿ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಜ್ ಗೋಪಾಲ್ ಫೆಬ್ರವರಿ- ಇಪ್ಪತ್ತು ರಂದು ಪುರವರ ಹೋಬಳಿಯ ಪೂಜಾರಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಎಸ್ಡಿಪಿ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ಸಿಸಿ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದಿದ್ದಾಗ ಅದೇ ಹೋಬಳಿ ಹುಣಸವಾಡಿ ಗ್ರಾಮದ ವಿಎಸ್ಸೆಸ್ಸೆನ್ ನಿರ್ದೇಶಕ ಅಶ್ವತ್ಥಪ್ಪ ಮತ್ತು ಅವರ ಹಿಂಬದಿ ಸವಾರ ಕೃಷ್ಣಮೂರ್ತಿ ದ್ವಿಚಕ್ರ ವಾಹನದಲ್ಲಿ ಬಂದು ಜಾತಿ ನಿಂದನೆ ಮಾಡುವುದರ ಜೊತೆಗೆ ಹಲ್ಲೆ ಮಾಡಿದ್ದರೆಂದು ಆರೋಪಿಸಿ ಎಂಜಿನಿಯರ್ ರಾಜ್ ಗೋಪಾಲ್ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .       ಈ…

ಮುಂದೆ ಓದಿ...

ತುಮಕೂರು: ಒಂದೇ ದಿನ 95 ಕೊರೊನಾ ಪ್ರಕರಣ: 2 ಸಾವು!!

ತುಮಕೂರು:      ತುಮಕೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಉಲ್ಬಣವಾಗುತ್ತಿದ್ದು, ನಿರೀಕ್ಷೆಗೂ ಮೀರಿದ ಸೋಂಕಿತರ ಸಂಖ್ಯೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಆತಂಕದಿಂದ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.       ತುಮಕೂರು ನಗರವೊಂದರಲ್ಲೇ 69 ಪ್ರಕರಣಗಳು, ಶಿರಾ ತಾಲೂಕಿನಲ್ಲಿ 17 ಪ್ರಕರಣಗಳು, ಪಾವಗಡ -4 ಪ್ರಕರಣ, ಕೊರಟಗೆರೆ-3, ಮಧುಗಿರಿ 2 ಪ್ರಕರಣಗಳು ಸೇರಿದಂತೆ ಒಟ್ಟು 95 ಪ್ರಕರಣಗಳು ಒಂದೇ ದಿನ ವರದಿಯಾಗಿದೆ. ತುಮಕೂರು ನಗರದಲ್ಲಿ ಬಂದಿರುವ 69 ಪಾಸಿಟೀವ್ ಪ್ರಕರಣಗಳ ಪೈಕಿ 29 ಪ್ರಕರಣಗಳು ಪೊಲೀಸ್ ಇಲಾಖೆಯವೇ ಎಂದು ವರದಿಯಾಗಿರುವುದು ಮತ್ತೊಂದು ವಿಶೇಷ.       29 ಜನ ಪೊಲೀಸ್ ಇಲಾಖೆಯವರ ಪೈಕಿ ಕೆಎಸ್‍ಆರ್‍ಪಿಯ 12ನೇ ಬೆಟಾಲಿಯನ್‍ನ -14 ಮಂದಿ, ಕುಣಿಗಲ್, ತಿಪಟೂರು, ತುಮಕೂರು ಟೌನ್ ತಲಾ ಒಂದೊಂದು ಪ್ರಕರಣ, ಕಳ್ಳಂಬೆಳ್ಳ-2ದಲ್ಲಿ ಕೊರೊನಾ ಸೋಂಕು ವರದಿ…

ಮುಂದೆ ಓದಿ...

ಪೊಲೀಸ್ ಗೌರವದೊಂದಿಗೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರವರ ಅಂತ್ಯ ಸಂಸ್ಕಾರ

ಗುಬ್ಬಿ:       ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ವ್ಯಕ್ತಿಗಳನ್ನು ಯಾವುದೇ ಮೂಲಾಜಿಲ್ಲದೇ ಕಾನೂನಿನ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಕಾನೂನು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾದುಸ್ವಾಮಿ ಎಚ್ಚೆರಿಸಿದರು.       ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಕದರೇಗೌಡನಪಾಳ್ಯದಲ್ಲಿ ಬಂಗಾರ ಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾರಿ ನೌಕರರು ಅವರದ್ದೇ ಆದ ಕಾನೂನು ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು. ಇದರಿಂದ ಕೆಲವು ಜನಗಳಿಗೆ ವ್ಯತ್ಯಸವಾಗುತ್ತಿದ್ದು ಇದನ್ನೇ ವ್ಯಕ್ತಿಗತವಾಗಿ ತಗೆದುಕೊಂಡು ಚಾಕುವಿನಿಂದ ಹಿರುಯುವಂತಹ ಕೆಲಸವನ್ನು ಮಾಡಿರುವಂತಹ ವ್ಯಕ್ತಿಗೆ ಯಾವುದೇ ಸಹಾನುಭೂತಿ ತೋರಿಸದೇ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ತಿಳಿಸಿದ ಅವರು ಮೃತ ಕುಟುಂಬದವರಿಗೆ ಸಹಕಾರದಿಂದ ನೀಡುವ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತದೆ ಇನ್ನು ಮುಂದೆ ಯಾವುದೇ ಅಧಿಕಾರಿಗಳು ಹಿಂಜೆರಿಯುವಂತಹ ವಾತವರಣವನ್ನು ಸೃಷ್ಠಿ ಮಾಡುವುದಿಲ್ಲ ಎಂದು ತಿಳಿಸಿದರು.  …

ಮುಂದೆ ಓದಿ...