ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಬಂಧನ : 90 ಗ್ರಾಂ ಚಿನ್ನ, 2,80,000 ಹಣ ವಶ

 ತುಮಕೂರು:      ಗುಬ್ಬಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ರಾಜ ಆಲಿಯಾಸ್ ಯರ್ರೋಡು ಬಿನ್(26)  ಕೂಲಿ ಕೆಲಸ ತುಮಕೂರಿನ ದಿಬ್ಬೂರು ಜನತಾ ಕಾಲೋನಿ ವಾಸಿಯನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ತುಮಕೂರು ನಗರ ಪೊಲೀಸ್ ಠಾನಾ ಸರಹದ್ದಿನ ಎರಡು ಮನೆ ಕಳವು ಪ್ರಕರಣಗಳು ಮತ್ತು ಜಯನಗರ ಪೊಲೀಸ್ ಠಾಣಾ ಸರಹದ್ದಿನ ಎರಡು ಮನೆ ಕಳವು ಪ್ರಕರಣಗಳು ಮತ್ತು ಗುಬ್ಬಿ ಟೌನ್‍ನಲ್ಲಿ ಮನೆ ಕಳವು ಸೇರಿದಂತೆ ಒಟ್ಟು 5 ಪ್ರಕರಣಗಳನ್ನು ಪತ್ತೆ ಹಚ್ಚಿ,  ಒಟ್ಟು 2,80,000 ರೂ. ಬೆಲೆಯ 90 ಗ್ರಾಂ ಚಿನ್ನದ ಆಭರಣ ಮತ್ತು 930 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದೆ.       ತುಮಕೂರು ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ವೆಂಕಟಸ್ವಾಮಿರವರ ನೇತೃತ್ವದಲ್ಲಿ ಶ್ರೀ ದೀಪಕ್, ಪಿಎಸ್‍ಐ ಶ್ರೀ ಟಿ.ಎಂ.ಗಂಗಾಧರ್ ಹಾಗೂ ಸಿಬ್ಬಂಣಧಿಯವರಾದ ನವೀನ್ ಕುಮಾರ್, ನಾಗರಾಜು ಮತ್ತು ವಿಜಯಕುಮಾರ್ ರವರುಗಳ ತಂಡವು…

ಮುಂದೆ ಓದಿ...

ವಿನಾಶದಂಚಲ್ಲಿ ಜಯಮಂಗಲಿ ನದಿ

ತುಮಕೂರು:        ಜನರ ಜೀವನಾಡಿಯಾಗಬೇಕಿದ್ದ ಜಯಮಂಗಲಿ ನದಿ ಮರಳು ಲೂಟಿಕೋರರ ತೋಳ್ತೆಕ್ಕೆಗೆ ಸಿಲುಕಿ ಅವಸಾನದ ಅಂಚನ್ನು ತಲುಪಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಹಾಗೂ ಮಧುಗಿರಿಯ ಮಧ್ಯಭಾಗದಲ್ಲಿ ಹರಿಯುವ ಜಯಮಂಗಲಿ ನದಿಯ ನೀರಿನಿಂದ ಬರಗಾಕಲದ ನಡುವೆ ರೈತರು ಹಸನ್ಮುಖಿಯಾಗುತ್ತಿದ್ದರು. ನದಿಯ ಆಸು-ಪಾಸಿನ ರೈತರು ಆ ಭಾಗದ ರೈತಾಪಿವರ್ಗ ಜಯಮಂಗಲಿಯನ್ನೇ ಅವಲಂಬಿಸಿ ಕೃಷಿಯಲ್ಲಿ ತೊಡಗುತ್ತಿತ್ತು.       ಆದರೆ, ಭ್ರಷ್ಟ ರಾಜಕಾರಣಿಗಳ ಚೇಲಾಗಳು ನದಿಯ ಭಾಗದಲ್ಲಿ ನಿರಂತರವಾಗಿ ಮರಳನ್ನು ಬಗೆಯುತ್ತಿರುವುದರಿಂದ ಮರಳು ಲೂಟಿಕೋರರ ಹಣದ ದಾಹಕ್ಕೆ ರೈತರ ಜೀವಸೆಲೆಯಾಗಬೇಕಿದ್ದ ಜಯಮಂಗಲಿ ನದಿ ಅವಸಾನದ ಅಂಚು ತಲುಪಿದ್ದು, ಜಯಮಂಗಲಿ ನದಿಯ ಆಸು-ಪಾಸಿನ ಜಮೀನುಗಳಲ್ಲಿ ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ನೀರು ಬಾರದೆ,ರೈತಾಪಿ ವರ್ಗ ಪರಿತಪಿಸುವಂತಾಗಿದೆ. ಇದಕ್ಕೆ ಕಾರಣ ಮರಳು ಮಾಫಿಯಾ ಅತಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕದ ಅಧಿಕಾರಿ ವರ್ಗ ಲಂಚದ ದಾಹಕ್ಕೆ ಸಿಲುಕಿ…

ಮುಂದೆ ಓದಿ...

ನಾಳೆ ವಿಶ್ವ ಏಡ್ಸ್ ದಿನ

ತುಮಕೂರು:        ಜನರಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 1ರಂದು “ವಿಶ್ವ ಏಡ್ಸ್ ದಿನ”ವನ್ನಾಗಿ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷ “ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ತಿಳಿದುಕೊಳ್ಳಿ” ( “Know your HIV status”) ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು.       ಹೆಚ್.ಐ.ವಿ. ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತು. ಹೆಚ್.ಐ.ವಿ ಸೋಂಕನ್ನು ಬರದಂತೆ ತಡೆಯಲು ಯಾವ ಲಸಿಕೆಯೂ ಇಲ್ಲ. ಪೂರ್ಣ ಮಟ್ಟದಲ್ಲಿ ಗುಣಪಡಿಸುವ ಔಷಧಿಗಳೂ ಇಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಈ ಸೋಂಕಿನ ತಡೆಗಿರುವ ಏಕೈಕ ಮಾರ್ಗ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏಡ್ಸ್ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಡಿಸೆಂಬರ್ 1ರಂದು “ವಿಶ್ವ ಏಡ್ಸ್ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಗಿದೆ.       ಬನ್ನಿ, ಏಡ್ಸ್ ರೋಗದ ಲಕ್ಷಣಗಳು, ಹರಡುವಿಕೆ, ನಿಯಂತ್ರಣ, ಚಿಕಿತ್ಸಾ ವಿಧಾನ ಹಾಗೂ ಜಿಲ್ಲೆಯಲ್ಲಿರುವ ಏಡ್ಸ್ ಸೋಂಕಿತರ…

ಮುಂದೆ ಓದಿ...

ಕೊಳವೆ ಮಾರ್ಗದಲ್ಲಿ ಕೊಳಚೆ ಹಾಗೂ ಹುಳವಿರುವ ನೀರು!!

ಚಿಕ್ಕನಾಯಕನಹಳ್ಳಿ :      ಅಧಿಕಾರಿಗಳ ನಿರ್ಲಕ್ಷತನವೋ, ಜನಪ್ರತಿನಿಧಿಗಳ ಅಸೆಡ್ಡೆಯೋ ಗೊತ್ತಿಲ್ಲ, ಪಟ್ಟಣದ ಪುರಸಭೆಯಲ್ಲಿ ಮಾತ್ರ ಬೇಜವಬ್ದಾರಿಯಿಂದ ಪಟ್ಟಣದ 10ನೇ ವಾರ್ಡ್‍ನಲ್ಲಿ ಕೊಳವೆ ಮಾರ್ಗದಲ್ಲಿ ಕೊಳಚೆ ನೀರು ಹಾಗೂ ಹುಳವಿರುವ ನೀರು ಸರಬರಾಜಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.       ಪಟ್ಟಣದಲ್ಲಿ ಪ್ರಸಕ್ತ ಎಲ್ಲಾ ವಾರ್ಡ್‍ಗಳಿಗೂ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ, ಎಲ್ಲಾ ಮನೆಗಳಿಗೂ ಕೊಳಾಯಿ ಮೂಲಕ ಹಾಗೂ ಬೀದಿ ನಲ್ಲಿ ಮೂಲಕ ಪಟ್ಟಣದ ಜನತೆಗೆ ನೀರು ಸರಬರಾಜಾಗುತ್ತಿದೆ, ಸರಬರಾಜಾಗುತ್ತಿರುವ ನೀರನ್ನು ಜನತೆ ಕುಡಿಯಲು ಹಾಗೂ ಮನೆಯ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಶುಕ್ರವಾರ ಬ್ರಾಹ್ಮಣರ ಬೀದಿಯಲ್ಲಿ ಮುಂಜಾನೆ 6ಗಂಟೆಗೆ ನೀರು ಹಾಯಿಸಲಾಗಿದೆ ಆದರೆ ಬಂದಿರುವ ನೀರಿನಲ್ಲಿ ಪೂರ್ಣ ಕೊಳಚೆಯುಕ್ತ ನೀರು ಸರಬರಾಜಾಗಿದೆ, ನೀರಿನ ಜೊತೆಯಲ್ಲಿ ಹುಳುಗಳು ಸಹ ಬಂದಿವೆ, ಕೊಳಚೆ ನೀರನ್ನು ನೋಡದೆ ಜನರು ತೊಟ್ಟಿಯೊಳಗೆ ನೀರನ್ನು ಹಾಯಿಸಿದ್ದರಿಂದ ಈ ಮೊದಲು ಮನೆಯ ತೊಟ್ಟಿಯೊಳಗಿದ್ದ…

ಮುಂದೆ ಓದಿ...

ಸಂಸತ್ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ

 ತುಮಕೂರು:      ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಅಡಿಯಲ್ಲಿ 200ಕ್ಕೂ ಹೆಚ್ಚು ರೈತಕೂಲಿಕಾರರ ಸಂಘಟನೆಗಳು ದೆಹಲಿಯಲ್ಲಿ ನಡೆಸಿದ ನವೆಂಬರ್ 29 ಮತ್ತು 30ರ ಹೋರಾಟವನ್ನು ಬೆಂಬಲಿಸಿ ತುಮಕೂರು ನಗರದ ಸ್ವಾತಂತ್ರ್ಯ ಚೌಕದಲ್ಲಿ ರೈತ-ಕಾರ್ಮಿಕ, ವಿದ್ಯಾರ್ಥಿ-ಯುವಜನ, ಕಲಾವಿದರು ಒಳಗೊಂಡಂತೆ ಪ್ರತಿಭಟನೆ ನಡೆಸಲಾಯಿತು.       ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಸತ್ ವಿಶೇಷ ಅಧಿವೇಶನವನ್ನು ಕರೆದು ಮೋದಿಯವರು ಚುನಾವಣೆಗೆ ಮುಂಚೆ ನೀಡಿದ ಭರವಸೆಯ ಭಾಗವಾಗಿ ರೈತರ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇಕಡ 50ರಷ್ಟು ಲಾಭದ ಖಾತ್ರಿ ಕಾನೂನು, ರೈತಸ್ನೇಹಿ ವಿಮಾ ಯೋಜನೆ, ಕೃಷಿ ಅಭಿವೃದ್ಧಿಗೆ ಮಾಡಿರುವ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಿ ಸಾಲಮುಕ್ತಿ ಕಾಯಿದೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದು ಒತ್ತಾಯಿಸಲಾಯಿತು.       ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಕೆ.ದೊರೈರಾಜ್ ಅವರ ಭರವಸೆಗಳಿಂದಲೇ…

ಮುಂದೆ ಓದಿ...

ಕ್ಷೇತ್ರದಲ್ಲಿ ಶಾಸಕರ ಅಧಿಕಾರದ ಬಗ್ಗೆ ಚರ್ಚೆ

ಮಧುಗಿರಿ :       ಕ್ಷೇತ್ರದಲ್ಲಿ ಶಾಸಕರ ಅಧಿಕಾರವೇನು ಎಂಬುದರ ಬಗ್ಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ತಾ.ಪಂ.ಅಧ್ಯಕ್ಷರಾದಿಯಾಗಿ ಬಹುತೇಕ ಸದಸ್ಯರು ಒಕ್ಕೂರಲಿನ ತಮ್ಮ ಕಾರ್ಯ ವ್ಯಾಪ್ತಿಯ ಕೆಲಸಗಳಿಗೆ ಮೂಗು ತೂರಿಸದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಂತಹ ಘಟನೆ ಶುಕ್ರವಾರ ನಡೆಯಿತು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರ ಅನುದಾನದಲ್ಲಿ ನಾವ್ಯಾರು ಕೆಲಸ ಕೇಳುವುದಿಲ್ಲ ತಾಲೂಕು ಪಂಚಾಯಿತಿಗೆ ಬಂದಿರುವ ಅನುದಾನದಲ್ಲಿ ನಮ್ಮ ಕೆಲಸ ನಾವು ಮಾಡುತ್ತೇವೆ. ನಾವುಗಳು ಸರಕಾರದ ಹಂತದಲ್ಲಿ ಸಚೀವರುಗಳನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿರುತ್ತೇವೆ. ನಮ್ಮ ಕ್ಷೇತ್ರಗಳ ವ್ಯಾಪ್ತಿಯ ಕಾಮಗಾರಿಗಳಿಗೆ ಶಾಸಕರ ನೆಪವೊಡ್ಡಿ ಕೆಲಸ ಬದಲಾವಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ತಾಲೂಕು ಪಂಚಾಯಿತಿ ಇರುವುದು ಯಾಕೆ ಎಂದು ಅಧ್ಯಕ್ಷ ಇಂದಿರಾದೇನಾನಾಯ್ಕ ಹಾಗೂ…

ಮುಂದೆ ಓದಿ...

ರಸ್ತೆಗಳ ನಿರ್ವಹಣೆ ಕಾಮಗಾರಿಗಳಿಗಾಗಿ ತಾಲ್ಲೂಕಿಗೆ 67.94 ಲಕ್ಷರೂ ಬಿಡುಗಡೆ : ಶಾಸಕ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ :       2018-19ನೇ ಸಾಲಿಗೆ ಗ್ರಾಮೀಣ ರಸ್ತೆಗಳ ನಿರ್ವಹಣೆ ಕಾಮಗಾರಿಗಳಿಗಾಗಿ ತಾಲ್ಲೂಕಿಗೆ 67.94ಲಕ್ಷರೂ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸಿದ ಶಾಸಕರು, ತಾಲ್ಲೂಕಿಗೆ 2018-19ನೇ ಸಾಲಿನ ರಸ್ತೆಗಳ ನಿರ್ವಹಣೆಗೆ ನಿರ್ವಹಣಾ ಅನುದಾನದ ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ಕಾಮಗಾರಿಯ ಕ್ರಿಯಾ ಯೋಜನೆ ಪಟ್ಟಿ ತಯಾರಿಸುವ ಬಗ್ಗೆ ಚರ್ಚಿಸಿದರು.       ಸರ್ಕಾರ ನೀಡಿರುವ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತುರ್ತು ಹಾಗೂ ಅಗತ್ಯ ರಸ್ತೆ, ಚರಂಡಿ ಮತ್ತು ಕಾಲುಸಂಕ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಮತ್ತು ಅನುದಾನವನ್ನು ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಉದ್ದಳತೆಗಳಿಗೆ ಅನುಗುಣವಾಗಿ ಸಮನಾಗಿ ಹಂಚಿಕೆ ಮಾಡಬೇಕಾಗಿದೆ ಎಂದ ಅವರು, ಕ್ರಿಯಾ ಯೋಜನೆ ತಯಾರಿಸುವಾಗ ಪ್ರಕೃತಿ ವಿಕೋಪದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆ, ಚರಂಡಿ ಮತ್ತು…

ಮುಂದೆ ಓದಿ...

ಕನ್ನಡ ನಾಡು-ನುಡಿ: ಅಭಿಮಾನ ಬೆಳೆಸಿಕೊಳ್ಳಲು ಕರೆ

ತುಮಕೂರು :       ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್ ಅವರು ಮಕ್ಕಳಿಗೆ ಕರೆ ನೀಡಿದರು. ಬೆಂಗಳೂರಿನ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಮಕ್ಕಳ ಸಹಾಯವಾಣಿಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಬಾಲಭವನದಲ್ಲಿ “ಕನ್ನಡ ರಾಜ್ಯೋತ್ಸವ” ಹಾಗೂ “ಮಕ್ಕಳ ದಿನಾಚರಣೆ”ಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲೆ/ಕನ್ನಡ ಗೀತೆ/ರಂಗೋಲಿ/ವೇಷಭೂಷಣ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಆಂಗ್ಲಭಾಷೆಯನ್ನು ಕಲಿಯುವುದರೊಂದಿಗೆ ಮಾತೃ ಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.       ಡಿಡಿಪಿಐ ಕೆ.ಮಂಜುನಾಥ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರಲ್ಲದೆ,…

ಮುಂದೆ ಓದಿ...

ಡಿ.02 : ಕಟ್ಟಡ ಕಾರ್ಮಿಕರಿಂದ ಬೆಂಗಳೂರು ಚಲೋ

 ತುಮಕೂರು:       ಕಟ್ಟಡ ಕಾರ್ಮಿಕರ ಮಂಡಳಿಗೆ ನರೇಗಾ ಕಾರ್ಮಿಕರ ನೊಂದಣಿಯನ್ನು ತಡೆಗಟ್ಟಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 2 ರಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಐಟಿಯುಸಿ ಹಾಗೂ ಇನ್ನಿತರ ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ 2006ರಲ್ಲಿ ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ವಿತ್ವಕ್ಕೆ ಬಂದಿದ್ದು,2018ರ ಸೆಪ್ಟಂಬರ್ ಅಂತ್ಯಕ್ಕೆ ಸುಮಾರು 18.18 ಲಕ್ಷದ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿದ್ದು, ಸೆಸ್ ರೂಪದಲ್ಲಿ 7064.74 ಕೋಟಿ ರೂ ಹಣ ಸಂಗ್ರಹವಾಗಿದೆ.ತಮ್ಮಲ್ಲಿ ನೊಂದಾಯಿಸಿರುವ ಕಾರ್ಮಿಕರಿಗೆ 14 ವಿವಿಧ ತರಹದ ಸೌಲಭ್ಯ ನೀಡಬೇಕಾದ ಮಂಡಳಿ ಇದುವರೆಗೂ ಕೇವಲ 418 ಕೋಟಿ…

ಮುಂದೆ ಓದಿ...

ಗೂಬೆ, 2 ತಲೆಯ ಹಾವು ಕೊಡುವುದಾಗಿ ಸುಲಿಗೆ ಮಾಡುತ್ತಿದ್ದ ಮೂವರ ಅಂದರ್

ತುಮಕೂರು:         ಐದು ಬೆರಳಿನ ಗೂಬೆ ಹಾಗೂ ಎರಡು ತಲೆಯ ಹಾವು ನೀಡುವುದಾಗಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲಾ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಆನಂದ(35), ದೀಪಾ(38), ಜಯಾ(45) ಬಂಧಿತ ಆರೋಪಿಗಳು.  ಕಾರ್ಯಾಚರಣೆ ವೇಳೆ ಅದೇ ಕಾಲೋನಿಯ ನಿವಾಸಿಗಳಾದ ಚಿನ್ನು(25), ವಿಜುಕುಮಾರ್(45) ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.       ಆರೋಪಿಗಳು ಪತ್ರಕರ್ತರೊಬ್ಬರನ್ನು ಸಂಪರ್ಕಿಸಿ ಐದು ಬೆರಳಿನ ಗೂಬೆ ಹಾಗೂ 2 ಕಾಲಿನ ಹಾವುಗಳನ್ನು ಮನೆಯಲ್ಲಿಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತಾರೆ ಎಂದು ನಂಬಿಸಿದ್ದರು. ಇದನ್ನು ಪೊಲೀಸಗರ ಗಮನಕ್ಕೆ ತಂದಾಗ ಪೊಲೀಸರು ಆ ಪತ್ರಕರ್ತನ ಮೂಲಕ ಕಾರ್ಯತಂತ್ರ ರೂಪಿಸಿದ್ದಾರೆ.        ಅದರಂತೆ ಪತ್ರಕರ್ತ ತನ್ನ ಸ್ನೇಹಿತನೊಂದಿಗೆ ಅಕ್ಕಿಪಿಕ್ಕಿ ಕಾಲೋನಿಗೆ ಹೋದಾಗ…

ಮುಂದೆ ಓದಿ...