ಸ್ಮಾರ್ಟ್‍ಸಿಟಿ ಯೋಜನೆಯಡಿ ಗೂಬೆಹಳ್ಳ ಪಾರ್ಕ್ ಅಭಿವೃದ್ಧಿ : ಭೂಬಾಲನ್

ತುಮಕೂರು:       ನಗರದ ಅತ್ಯಂತ ದೊಡ್ಡ ಪಾರ್ಕ್ ಗೋಕುಲ ಬಡಾವಣೆಯಲ್ಲಿರುವ ಗೂಬೆಹಳ್ಳ ಪಾರ್ಕ್‍ನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದರು.       ನಗರದ ಗೋಕುಲ ಬಡಾವಣೆಯ ಕನಕಾಂಬರ ರಸ್ತೆ (9)ನೇ ಉದ್ಯಾನವನದಲ್ಲಿ ಪ್ರಜ್ಞಾ-ಗೋಕುಲ ಬಡಾವಣೆ ಮೊದಲ ಹಂತದ ನಾಗರೀಕ ಸಮಿತಿ ವತಿಯಿಂದ ಪರಿಸರ ದಿನದ ಅಂಗವಾಗಿ ಗುರುವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋಕುಲ ಬಡಾವಣೆಯ ಸುಮಾರು 2 ಎಕರೆ ವಿಸ್ತೀರ್ಣವುಳ್ಳ ಗೂಬೆಹಳ್ಳ ಪಾರ್ಕ್‍ನಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಟ್ರೀ-ಪಾರ್ಕ್ ನಿರ್ಮಾಣ, ಮಕ್ಕಳ ಆಟದ ಮೈದಾನ, ಜಿಮ್, ಸಣ್ಣ ಪಾಂಡ್ ನಿರ್ಮಾಣ ಮಾಡುವ ಯೋಜನೆ ಇದೆ. ಇಲ್ಲಿ ಹೆಚ್ಚು ಮರಗಿಡಗಳನ್ನು ಬೆಳೆಸುವ ಉದ್ಧೇಶ ಹೊಂದಲಾಗಿದೆ ಎಂದರು.       ಗೂಬೆಹಳ್ಳ ಪಾರ್ಕ್‍ನಲ್ಲಿ ಕುಡುಕರ ಹಾವಳಿ ಹೆಚ್ಚಿದೆ ಎಂಬುದಾಗಿ ಕೇಳಿ ಬಂದಿದ್ದು, ಪಾರ್ಕ್‍ನ್ನು…

ಮುಂದೆ ಓದಿ...

ಮಧುಗಿರಿ ಪಟ್ಟಣದಲ್ಲಿ 1500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು!!

ಮಧುಗಿರಿ:       ಪಟ್ಟಣದಲ್ಲಿರುವ ದ್ವಿತೀಯ ಪಿಯುಸಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ 1605 ವಿದ್ಯಾರ್ಥಿಗಳು ಆಂಗ್ಲ ವಿಷಯ ಪರೀಕ್ಷೆಗೆ ನೋಂದಾಯಿಸಿದ್ದರು 1500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.       ಮಾರ್ಚ್ -23 ರಂದೇ ನಡೆಯಬೇಕಿದ್ದ ಈ ಪರೀಕ್ಷೆ ಕರೋನಾ ವೈರಸ್ ಹರಡುವಿಕೆ ಯಿಂದಾಗಿ ಜೂನ್ -18 ರಂದು ನಡೆದಿದೆ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಜಿ. ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಉಷ್ಣಾಂಶ ಪರೀಕ್ಷೆ ,ಸಾಮಾಜಿಕ ಅಂತರ, ಸ್ಯಾನಿಟೈಸರ್ ಅನ್ನು ಪ್ರವೇಶದ್ವಾರದಲ್ಲಿ ವ್ಯವಸ್ಥೆ ಮಾಡಲಾಯಿತು.       ಗ್ರಾಮಾಂತರ ಪ್ರದೇಶದ ಗಡಿ ಭಾಗದಿಂದಲೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಮತ್ತು ಮರಳಿ ಗ್ರಾಮಕ್ಕೆ ತಲುಪಲು 22- ಕೆ ಎಸ್ ಆರ್ ಟಿಸಿ ಬಸ್ಸುಗಳನ್ನು ವ್ಯವಸ್ಥೆ ಕಲ್ಪಿಸಲಾಯಿತು. ಬಸ್ಸ್ ನಲ್ಲಿ ಬಹುತೇಕ ವಿದ್ಯಾರ್ಥಿನಿಯರೇ ಆಗಮಿಸಿದ್ದಾರೆಂದು ಮಾಹಿತಿ ಬಂದಿದೆ.         ವಿದ್ಯಾರ್ಥಿಗಳು…

ಮುಂದೆ ಓದಿ...

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ : ಡಿಸಿ ಎಚ್ಚರಿಕೆ

ತುಮಕೂರು:       ಸಾರ್ವಜನಿಕ ಸ್ಥಳಗಳಲ್ಲಿ ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಭಾರತೀಯ ವೈಧ್ಯಕೀಯ ಸಂಘ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್‍ದಿನದ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.       ಮಾಸ್ಕ್ ಧರಿಸದೇ ಓಡಾಡುವವರಿಗೆ ಪಂಚಾಯಿತಿ ಬಿಲ್ ಕಲೆಕ್ಟರ್‍ನಿಂದ ಕಾರ್ಪೋರೇಷನ್ ಕಮೀಷನರ್ ಕಛೇರಿಯ ಬಿಲ್ ಕಲೆಕ್ಟರ್‍ವರೆಗೂ ಹಾಗೂ ಪೊಲೀಸರಿಗೆ ದಂಡ ವಿಧಿಸುವ ಅಧಿಕಾರವನ್ನು ಸರ್ಕಾರ ನೀಡಿದ್ದು, ದಂಡ ವಿಧಿಸುವ ಮುನ್ನ ಜಾಥಾ ಮಾಡುವ ಮುಖಾಂತರ ಜನರಿಗೆ ಕೋವಿಡ್-19 ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.       ಕೋವಿಡ್-19…

ಮುಂದೆ ಓದಿ...

ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆಗೆ ಅಜ್ಜಗೊಂಡನಹಳ್ಳಿಯಲ್ಲಿ 4 ಎಕರೆ ಮೀಸಲು

ತುಮಕೂರು:       ನಗರದ ಹೊರವಲಯದ ಅಜ್ಜಗೊಂಡ ನಹಳ್ಳಿಯಲ್ಲಿರುವ ಪಾಲಿಕೆಯ ಕಸ ಸುರಿಯುವ 40 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆಗೆ ಹಾಗೂ 4 ಎಕರೆ ಪ್ರದೇಶದಲ್ಲಿ ಹಂದಿಗಳನ್ನು ಮೇಯಿಸಲು ಜಾಗ ನೀಡಲು ಪಾಲಿಕೆ ತೀರ್ಮಾನಿಸಿದೆ.       ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ರವರ ಕಚೇರಿಯಲ್ಲಿ ಮೇಯರ್ ಫರಿದಾ ಬೇಗಂ ರವರ ಅಧ್ಯಕ್ಷತೆಯಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.       ಇತ್ತೀಚೆಗೆ ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ನಾಗರಿಕರು ಅಪಘಾತಗಳಿಗೆ ಒಳಗಾಗಿ ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ನಾಗರಿಕ ಸಮಿತಿಗಳು, ಮಹಾನಗರ ಪಾಲಿಕೆಯ ಸದಸ್ಯರ ದೂರುಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಆಯುಕ್ತರು ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಹಂದಿಜೋಗರ ಜತೆ…

ಮುಂದೆ ಓದಿ...