ಕೊರಟಗೆರೆ : ಪುಟಾಣಿ ಮಕ್ಕಳಿಗೆ ಕೊರೊನಾ : ಗ್ರಾಮದ 2 ರಸ್ತೆ ಕಡೆ ಸಿಲ್‍ಡೌನ್!!

 ಕೊರಟಗೆರೆ:       ಮನೆಯಿಂದ ಹೊರಗಡೆ ಹೋಗದೇ ಕಳೆದ 3ತಿಂಗಳಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತೀದ್ದ 9ವರ್ಷದ ಇಬ್ಬರು ಮಕ್ಕಳಿಗೆ ಕೊರೊನಾ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ವರದಿಯ ಆತಂಕದ ವಾತವರಣ ಕೊರಟಗೆರೆ ಅಧಿಕಾರಿಗಳ ಜೊತೆ ಜನತೆಯ ಭಯಕ್ಕೆ ಕಾರಣವಾದ ಹಿನ್ನಲೆ ಎರಡು ಗ್ರಾಮವನ್ನು ಸಿಲ್‍ಡೌನ್ ಮಾಡಲಾಗಿದೆ.       ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಗ್ರಾಮದ 9ವರ್ಷ ಹೆಣ್ಣುಮಗು ಮತ್ತು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ದೇವರಹಳ್ಳಿಯ 9ವರ್ಷದ ಮಗುವಿನ ಗಂಟಲು ದ್ರವ ಪರೀಕ್ಷೆ 25ರಂದು ನಡೆದಿದ್ದು ಜೂ.28ರಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ.       ದೇವರಹಳ್ಳಿಯ ಮಗುವಿನ ಪ್ರಥಮ ಸಂಪರ್ಕದ 12ಜನ ಮತ್ತು ಶಕುನಿತಿಮ್ಮನಹಳ್ಳಿ ಮಗುವಿನ ಪ್ರಥಮ ಸಂಪರ್ಕದ 16ಜನರ ಗಂಟಲು ಪರೀಕ್ಷೆ ನಡೆಸಿ ರೆಡ್ಡಿಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಥಾನಿಕ…

ಮುಂದೆ ಓದಿ...

ತುಮಕೂರು : ಕುರಿಗಾಹಿಗೆ ಕೊರೊನಾ ; ಕುರಿಗಳಿಗೆ ಕ್ವಾರಂಟೈನ್!!

ತುಮಕೂರು:        ಕುರಿಗಾಹಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಆತ ಮೇಯಿಸುತ್ತಿದ್ದ ಕುರಿಗಳಿಗೂ ಕೂಡ ಕ್ವಾರಂಟೈನ್ ಮಾಡುವಂತಹ ನಿರ್ಧಾರಕ್ಕೆ ತುಮಕೂರು ಜಿಲ್ಲಾಡಳಿತ ಬಂದಿದೆ.       ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ 40 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳಿಗೆ ಮೇಯಲು ಹೊರಗಡೆ ಬಿಡದಂತೆ ನಿರ್ಧರಿಸಲಾಗಿದೆ.       ಈಗಾಗಲೇ ಸೋಂಕಿತ ಕುರಿಗಾಹಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಈತ ಕಾಯುತ್ತಿದ್ದ ಕುರಿಗಳಲ್ಲಿ ಕೊರೊನಾ ವೈರಸ್ ವಿಭಿನ್ನ ಸ್ವರೂಪದಲ್ಲಿ ಇರುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕುರಿಗಳ ಸ್ವ್ಯಾಬ್ ತೆಗೆದು ಪರೀಕ್ಷೆಗೆಂದು ಭೋಪಾಲ್​​ನಲ್ಲಿರುವ ಲ್ಯಾಬ್​ಗೆ ಕಳುಹಿಸಲು ನಿರ್ಧರಿಸಲಾಗಿದೆ. ಕುರಿ ಮಾಂಸ ಸೇವಿಸುವವರಿಗೆ ಎಚ್ಚರಿಕೆ :      ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿ ಮಾಂಸವನ್ನು ಜನರು ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರವೇ ಅದನ್ನು ಬಳಸಬೇಕು ಎಂದು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದಾಗಿ…

ಮುಂದೆ ಓದಿ...

ತುಮಕೂರು : ಮಹಿಳೆಗೆ ಕೊರೊನಾ ; ಜಿಲ್ಲಾ ನ್ಯಾಯಾಲಯ ಸೀಲ್​ ಡೌನ್!!​

 ತುಮಕೂರು:           ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ​ಡೌನ್ ಮಾಡಲಾಗಿದೆ.     ಕೊರೊನಾ ಸೋಂಕು ತುಮಕೂರು ಜಿಲ್ಲಾ ನ್ಯಾಯಾಲಯದ ಅಂಗಳಕ್ಕೂ ಪ್ರವೇಶಿಸಿದ್ದು, ಇಲ್ಲಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢವಾಗಿದೆ. ಹಾಗಾಗಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ​ಡೌನ್ ಮಾಡಲಾಗಿದೆ.       ನ್ಯಾಯಾಲಯದ ಎಲ್ಲಾ ಕಾರ್ಯ ಕಲಾಪಗಳನ್ನು ರದ್ದುಗೊಳಿಸಲಾಗಿದೆ. ಈವರೆಗೂ ಸುರಕ್ಷತೆಯಿಂದ ಸೀಮಿತ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿತ್ತು.  ಸೀಲ್​ ಡೌನ್ ಆದ ಹಿನ್ನೆಲೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮುಂದೆ ಓದಿ...

ಕಂಟೈನ್‍ಮೆಂಟ್ ವಲಯದ ಪ್ರತಿಯೊಬ್ಬರನ್ನೂ ಪರೀಕ್ಷೆ ಮಾಡಿ : ಸಚಿವ

ತುಮಕೂರು:       ಜಿಲ್ಲೆಯಲ್ಲಿರುವ ಕಂಟೈನ್‍ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ತಪಾಸಣೆ ನಡೆಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.       ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಕೋವಿಡ್ ಸಂಬಂಧಿಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಕೋವಿಡ್-19ರ ಪ್ರಕರಣಗಳು ಹೆಚ್ಚಾಗುತ್ತಿವೆ. ಆದುದರಿಂದ ಕಂಟೈನ್‍ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್. ಪ್ರಯೋಗಾಲಯವಿರುವುದರಿಂದ ಹೆಚ್ಚಿನ ಪರೀಕ್ಷೆಯನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.       ತುಮಕೂರು ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‍ಗಳನ್ನು ಜಾಸ್ತಿ ಮಾಡಿ, ಫೀವರ್ ಕ್ಲಿನಿಕ್‍ಗೆ ಬಂದ ಪ್ರತಿಯೊಬ್ಬರಿಗೂ ಚೆಕ್ ಮಾಡಿ ಎಂದ ಅವರು, ಜಿಲ್ಲೆಯಲ್ಲಿರುವ ನಕಲಿ ವೈದ್ಯರು ಹಾಗೂ ಚೀಟಿಯಿಲ್ಲದೆ ಜ್ವರ, ನೆಗಡಿ, ಶೀತ, ಉಸಿರಾಟ ತೊಂದರೆಗೆ ಔಷಧಿಗಳನ್ನು ಮಾರಾಟ…

ಮುಂದೆ ಓದಿ...

ತುಮಕೂರು : ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ!!

ತುಮಕೂರು:        ತುಮಕೂರು ಜಿಲ್ಲಾ ಪೊಲೀಸ್ ಜಿಲ್ಲಾ ವರೀಷ್ಠಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರಿನಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ.        ಜಿಲ್ಲಾ ಪೊಲೀಸ್ ಕಛೇರಿಯ ಮೊಗಸಾಲೆಯಿಂದ ಭ್ರಷ್ಟಚಾರದ ಕಮಟು ವಾಸನೆ ಎಸಿಬಿ ಕಛೇರಿಯ ಅಂಗಳದವರೆಗೂ ತಲುಪಿದೆ ಎಂದರೆ ಇಲ್ಲಿನ ನಡೆದಿರುವ ಭ್ರಷ್ಟಾಚಾರ ತೀವ್ರತೆ ಎಷ್ಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಪ್ರಯಾಣ ಭತ್ಯೆ ಮತ್ತು ತುಟ್ಟಿಭತ್ಯೆಯ ಹೆಸರಿನಲ್ಲಿ ಭ್ರಷ್ಟಾಚಾರವಾಗಿರುವ ಆರೋಪ ವ್ಯಾಪಕವಾಗಿದ್ದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಹೆಸರಿನಲ್ಲಿಯೂ ಅಕ್ರಮ ಭ್ರಷ್ಟಾಚಾರ ಮಾಡಿರುವುದು ಕೇಳಿ ಬರುತ್ತಿದೆ.       ಈ ಭ್ರಷ್ಟಾಚಾರ ಕುರಿತು ಭ್ರಷ್ಟಾಚಾರ ನಿಗ್ರಹದಳ ಕಛೇರಿಗೆ ಲಿಖಿತ ದೂರು ನೀಡಿದ್ದು ಈ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಗೊಂಡಂತಿದೆ. ಎಸಿಬಿ…

ಮುಂದೆ ಓದಿ...