ತುಮಕೂರು : ಆ.2ರವರೆಗೆ ಪ್ರತಿ ಭಾನುವಾರ ಮದ್ಯ ಮಾರಾಟ ನಿಷೇಧ!!

 ತುಮಕೂರು :       ಕೋವಿಡ್-19ರ ಸೋಂಕು ನಿಯಂತ್ರಣ ಸಂಬಂಧ ಚಾಲ್ತಿಯಲ್ಲಿರುವ ಮುಂಜಾಗ್ರತಾ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜುಲೈ 5 ರಿಂದ ಆಗಸ್ಟ್ 2ರವೆರೆಗಿನ ಎಲ್ಲಾ ಭಾನುವಾರದಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.       ನಿಷೇಧಾವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯದಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಾಲಿ ಇರುವ ಮದ್ಯದಂಗಡಿಗಳ ಮುಚ್ಚುವ ವೇಳೆಯನ್ನು ರಾತ್ರಿ 9 ಗಂಟೆಗೆ ಬದಲಾಗಿ ರಾತ್ರಿ 8 ಗಂಟೆಗೆ ನಿಗಧಿಪಡಿಸಿ ಅವರು ಆದೇಶಿಸಿದ್ದಾರೆ.

ಮುಂದೆ ಓದಿ...

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮ

 ತುಮಕೂರು :       ಗ್ರಾಹಕರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡದ ಅಂಗಡಿ ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ತಿಳಿಸಿದರು.        ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದೇ ಓಡಾಡುವವರಿಗೆ ಪೊಲೀಸ್ ಹಾಗೂ ಪಂಚಾಯಿತಿಗಳ ಮುಖಾಂತರ ದಂಡ ವಿಧಿಸಲು ಈಗಾಗಲೇ ಸಂಬಂಧಿಸಿದವರಿಗೆ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಲಾಕ್ ಡೌನ್ ಆದ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಮಾರ್ಗಸೂಚಿಯನ್ನೇ ಈಗಲೂ ಅನುಸರಿಸಿ ಸಾರ್ವಜನಿಕರು ತಮ್ಮ ವ್ಯವಹಾರಗಳನ್ನು ನಡೆಸಬಹುದಾಗಿದೆ. ಮಾರ್ಗಸೂಚಿಯನ್ನು ನಿರ್ಲಕ್ಷ್ಯ ಮಾಡುವ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.       ಕೋವಿಡ್-19…

ಮುಂದೆ ಓದಿ...

ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್.ರಾಜಣ್ಣ ಸ್ಪರ್ಧೆ ಖಚಿತ

ಮಧುಗಿರಿ:       ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್. ರಾಜಣ್ಣ ಸ್ಪರ್ಧಿಸುವುದು ಖಚಿತ. ಜನರ ಆಶೀರ್ವಾದದೊಂದಿಗೆ ಶಾಸಕರಾಗಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಸಚಿವರಾಗುವುದು ನಿಶ್ಚಿತ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರ್.ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.       ತಾಲ್ಲೂಕಿನ ಮರುವೇಕೆರೆ ಗ್ರಾಮದಲ್ಲಿರುವ ಶ್ರೀ ಮಲೆ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಮರುವೇಕೆರೆ- ಗಂಜಲಗುಂಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿಯ ನೇರ ಪ್ರಸಾರ ಕಾರ್ಯಕ್ರಮ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.       ಮಧುಗಿರಿ ಕ್ಷೇತ್ರಕ್ಕೆ ಹೊರಗಿನವರು ಪಕ್ಷದ ಹೆಸರಿನಲ್ಲಿ ಯಾರೇ ಬಂದರೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರೇ ಆಗಿರುತ್ತಾರೆ.…

ಮುಂದೆ ಓದಿ...

ಮಧುಗಿರಿ : ಎಟಿಎಂ ಕಾರ್ಡ್ ಅದಲು-ಬದಲು : 22 ಸಾವಿರ ದೋಚಿ ಪರಾರಿ!!

ಮಧುಗಿರಿ:        ಎಟಿಎಂ ಕಾರ್ಡ್ ಅನ್ನು ಅದಲು- ಬದಲು ಮಾಡಿ ಗಾರ್ಮೆಂಟ್ಸ್ ಮಹಿಳೆಯ ಖಾತೆಯಲ್ಲಿದ್ದ 22ಸಾವಿರ ರೂ ಗಳನ್ನು ಅನ್ ಲ್ಯೆನ್ ಮೂಲಕ ಲಪಟಾಯಿಸಿರುವ ಘಟನೆ ಪಟ್ಟಣದ ಹೈಸ್ಕೂಲ್ ರಸ್ತೆಯಲ್ಲಿರುವ ಎಟಿಎಂ ಕೇಂದ್ರ ದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.       ಆಚೇನಹಳ್ಳಿ ಗ್ರಾಮದ ಗಾರ್ಮೆಂಟ್ಸ್ ಉದ್ಯೋಗಿಯಾಗಿರುವ ರೂಪ ರವರಿಗೆ ಸೇರಿರುವ ಎಸ್ ಬಿಐ ಬ್ಯಾಂಕಿನ ಎಟಿಎಂ ಕಾರ್ಡ್‍ನಲ್ಲಿದ್ದ ಹಣವನ್ನು ಡ್ರಾ ಮಾಡಿಕೊಂಡು ಬರುವಂತೆ ಅವರ ತಂದೆಯವರಿಗೆ ಕೊಟ್ಟು ಕಳುಹಿಸಿದ್ದಾರೆ.       ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಾರದ ತಂದೆ ಬೇರೊಬ್ಬರ ಸಹಾಯವನ್ನು ಕೇಳಿದ್ದಾರೆ. ಕರ್ನಾಟಕ ಬ್ಯಾಂಕಿನ ಎಟಿಎಂನಲ್ಲಿ ಡ್ರಾ ಮಾಡಲು ಮುಂದಾಗಿ ಪಿನ್ ನಂಬರ್ ತಿಳಿದುಕೊಂಡ `ಆಸಾಮಿ’ ಆ ಸಮಯದಲ್ಲಿ ತಪ್ಪು ಪಿನ್ನನ್ನು ಒಡೆದು ನಂತರ ಈ ಎಟಿಎಂನಲ್ಲಿ ಹಣ ಬರುವುದಿಲ್ಲ ಎಸ್.ಬಿ.ಐ ಬ್ಯಾಂಕಿನ ಎಟಿಎಂ ಕರೆದೊಯ್ಯುವ ವೇಳೆ…

ಮುಂದೆ ಓದಿ...

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಐಎಸ್ ಪೋರ್ಟಲ್‍ಗೆ ಅಪ್‍ಲೋಡ್ ಕಡ್ಡಾಯ

ತುಮಕೂರು:       ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳು ತಾವು ಅನುಷ್ಠಾನ ಮಾಡುವ ಯೋಜನೆಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾ ಪಂಚಾಯತಿಯಲ್ಲಿ ಜರುಗಿದ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪ್ರಗತಿ (ದಿಶಾ) ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೈಗೊಂಡಿರುವ ಯೋಜನೆಗಳು, ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಸಂಪೂರ್ಣ ಅಂಕಿ-ಅಂಶಗಳನ್ನು ತುಮಕೂರು ಜಿಐಎಸ್ ಪೋರ್ಟಲ್‍ನಲ್ಲಿ 1 ತಿಂಗಳೊಳಗಾಗಿ ಅಪ್‍ಲೋಡ್ ಮಾಡಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಅನುವಾಗುತ್ತದೆ. ಇದಕ್ಕಾಗಿ ಪ್ರತಿ ಇಲಾಖೆಯೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಇನ್ನೆರಡು ದಿನಗಳೊಳಗಾಗಿ ಅಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕೆಂದು ನಿರ್ದೇಶನ…

ಮುಂದೆ ಓದಿ...