ತುಮಕೂರು : ಜಿಲ್ಲಾಸ್ಪತ್ರೆಯಲ್ಲಿ ಸಾವು ; ಕೊರೊನಾ ಶಂಕೆ!

ತುಮಕೂರು:     ನಗರದ ಜಿಲ್ಲಾಸ್ಪತ್ರೆಯಲ್ಲಿ  ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೊರೊನಾ ಶಂಕೆ ವ್ಯಕ್ತವಾಗಿದೆ.       ವಿನೋಬಾ ನಗರದ 5 ನೇ ಕ್ರಾಸ್ ನಲ್ಲಿ ವಾಸವಿದ್ದ 56 ವರ್ಷದ ವ್ಯಕ್ತಿ ಟೈಲರ್ ವೃತ್ತಿ ಮಾಡಿಕೊಂಡಿದ್ದರು ಇವರಿಗೆ ಸಕ್ಕರೆ ಖಾಯಿಲೆ, ರಕ್ತದೊತ್ತಡ ಇತ್ತು ಎನ್ನಲಾಗಿದೆ. ಜ್ವರದಿಂದ ಬಳಲುತ್ತಿದ್ದ ಇವರು ಭಾನುವಾರ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಜ್ವರ ವಿದ್ದ ಕಾರಣ ಸಿದ್ದಗಂಗಾ ಆಸ್ಪತ್ರೆ ವೈಧ್ಯರು ಇವರನ್ನ ಕೋವಿಡ್ ಪರೀಕ್ಷೆ ಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.       ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇವರನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು ಗಂಟಲು ದ್ರವ ಪಡೆದು ಆರ್ ಟಿಪಿಸಿಆರ್ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಇವರನ್ನ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದು ಕಳೆದ ರಾತ್ರಿ 10.30 ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು…

ಮುಂದೆ ಓದಿ...

ಚಿ.ನಾ.ಹಳ್ಳಿ : 21 ವರ್ಷದ ಯುವಕನಿಗೆ ಕೊರೊನ ಪ್ರಕರಣ ದೃಢ!!

ಚಿಕ್ಕನಾಯಕನಹಳ್ಳಿ:        ಪಟ್ಟಣದಲ್ಲಿ ಕೊರೊನಾ ಪ್ರಕರಣವೊಂದು ವರದಿಯಾದ ಐದು ದಿನದಲ್ಲಿಯೇ ತಾಲ್ಲೂಕಿನ ಗೋಡೆಕೆರೆ ಬಳಿ ಮತ್ತೊಂದು ಕೊರೊನಾ ಸೋಂಕಿನ ಪ್ರಕರಣ ಧೃಡಪಟ್ಟಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.        ತಾಲ್ಲೂಕಿನ ಗೋಡೆಕರೆಯ ಗೊಲ್ಲರಹಟ್ಟಿ ಯಲ್ಲಿನ 21ವರ್ಷ ಯುವಕನಿಗೆ ಕೊರೊನಾ ಧೃಡಪಟ್ಟಿದೆ. ಈತನು ನೆಲಮಂಗಲದ ಬಳಿಯಿರುವ ಎವಿವಿ ಎಲೆಕ್ಟ್ರಿಕಲ್ ಕಂಪನಿಯಲ್ಲಿ ಎಂಸಿಬಿ ಬಿಡಿಭಾಗದ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜೂನ್ 18 ರಂದು ಅನಾರೋಗ್ಯದ ನಿಮಿತ್ತ ತನ್ನ ಸ್ನೇಹಿತನೊಂದಿಗೆ ಊರಿಗೆ ಬಂದಿದ್ದಾನೆ. ಜ್ವರ ಹೆಚ್ಚಾದಾಗ ಜೂನ್ 19 ರಂದು ಸಮೀಪದ ಗೋಡೆಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿನ ವೈದ್ಯರು ಗಂಟಲು ದ್ರವತೆಗೆಸಿಕೊಳ್ಳಲು ಸೂಚಿಸಿದ್ದಾರೆ, ಅದರಂತೆ ಆತನು 20 ರಂದು ಚಿ.ನಾ.ಹಳ್ಳಿಯ ಆರೋಗ್ಯಕೇಂದ್ರದಲ್ಲಿ ಗಂಟಲುದ್ರವ ನೀಡಿ ಬಂದಿದ್ದಾನೆ. ಇದೇ 23 ರಂದು ಬೆಳಿಗ್ಗೆ ಈತನಿಗೆ ಕೊರೊನಾ ಧೃಡಪಟ್ಟಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಆರೋಗ್ಯ ಇಲಾಖೆ ಹಾಗೂ…

ಮುಂದೆ ಓದಿ...

ಮಧುಗಿರಿ : ಕೆ.ಸಿ.ರೊಪ್ಪ ಕೊರೊನ ಸೋಂಕಿತ ಗುಣಮುಖ!!

ಮಧುಗಿರಿ:        ತಾಲೂಕಿನ ಕೆ.ಸಿ.ರೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಧೃಢವಾಗಿತ್ತು.       ಈ ವ್ಯಕ್ತಿಗೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖನಾಗಿ ಸ್ವಗ್ರಾಮಕ್ಕೆ ಮರಳಿದಾಗ ತಹಶೀಲ್ದಾರ್ ಡಾ:ಜಿ.ವಿಶ್ವನಾಥ್ ನೇತೃತ್ವದ ತಂಡ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.       ಈ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿತ್ತು . ಗ್ರಾಮಸ್ಥರಲ್ಲಿ ಕರೋನಾ ಆತಂಕ ಮನೆಮಾಡಿತ್ತು. ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಗುಣಮುಖನಾಗಿ ಬಿಡುಗಡೆಗೊಂಡ ಕಾರಣ ಗ್ರಾಮದಲ್ಲಿ ಸಂತಸದ ವಾತಾವರಣ ಕಂಡುಬಂದಿದೆ.       ಇಡೀ ತಾಲೂಕು ಆಡಳಿತ ಗ್ರಾಮದಲ್ಲಿ ಸೋಂಕು ಮತ್ತೊಬ್ಬರಿಗೆ ಹರಡದಂತೆ ಸೋಂಕಿತ ವ್ಯಕ್ತಿಯ ಕುಟುಂಬ ವರ್ಗ ಮತ್ತು ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಹೌಸ್ ಕ್ವಾರಂಟೈನ್ ಮಾಡಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.        ಈ ಗ್ರಾಮಕ್ಕೆ ಶಾಸಕ ಎಂ.ವಿ.ವೀರಭಧ್ರಯ್ಯ, ಜಿ.ಪಂ ಸಿ.ಇ.ಒ ಶುಭಾ…

ಮುಂದೆ ಓದಿ...

ಕೊರಟಗೆರೆ : ಮದುವೆಯಾದ 21 ದಿನಕ್ಕೆ ಯುವತಿ ಆತ್ಮಹತ್ಯೆ!!

ಕೊರಟಗೆರೆ:       ಮದುವೆಯಾಗಿ ಕೇವಲ 21ದಿನಕ್ಕೆ ಆಷಾಡ ಮಾಸದ ಪ್ರಯುಕ್ತ ತವರು ಮನೆಗೆ ಆಗಮಿಸಿದ್ದ ಪೂಜಾ ಎಂಬಾಕೆ ತಂದೆ ಮನೆಯಲ್ಲಿನ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ರಾತ್ರಿ ನಡೆದಿದೆ.       ತಾಲೂಕಿನ ಹೊಳವನಹಳ್ಳಿ ಹೋಬಳಿ ದುಗ್ಗೇನಹಳ್ಳಿ ಗ್ರಾಮದ ವೀರೆಗೌಡನ ಮಗಳಾದ ಪೂಜಾ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮದುವೆಯಾದ ನಂತರ ಮೊದಲ ಸಲ ತವರು ಮನೆಗೆ ಆಗಮಿಸಿದ್ದ ಪೂಜಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.       ಕೋಳಾಲ ಹೋಬಳಿ ವ್ಯಾಪ್ತಿಯ ಲಕ್ಕಮುತ್ತನಹಳ್ಳಿ ಗ್ರಾಮದ ಹನುಮಂತರಾಯಪ್ಪನ ಮಗ ಪ್ರದೀಪ್ ಎಂಬಾತನ ಜೊತೆ ಕಳೆದ 21ದಿನದ ಹಿಂದಷ್ಟೆ ಮದುವೆಯಾಗಿದ್ದಾಳೆ. ಆಷಾಡ ಮಾಸದ ಪ್ರಯುಕ್ತ ತವರು ಮನೆಗೆ ಆಗಮಿಸಿದ ವೇಳೆ ದುರ್ಘಟನೆ ನಡೆದಿದೆ.         ಮರಣೋತ್ತರ ಪರೀಕ್ಷೆಗಾಗಿ ಮೃತ ಪೂಜಾಳನ್ನು ಕೊರಟಗೆರೆ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ…

ಮುಂದೆ ಓದಿ...

ಚೇಳೂರಿನಲ್ಲಿ ಮೂರನೇ ಕೊರೊನ ಪ್ರಕರಣ ಪತ್ತೆ!!

ಗುಬ್ಬಿ:       ತಾಲ್ಲೂಕಿನ ಚೇಳೂರು ಸಮೀಪದ ಅಂತಾಪುರ ಕೋಡಿ ಎಂಬ ಗ್ರಾಮದಲ್ಲಿ ಕಾಣಿಸಿಕೊಂಡ ಮೂರನೇ ಕೊರೋನಾ ಸೋಂಕಿತ ಪ್ರಕರಣ ಇಡೀ ತಾಲ್ಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ.       ಚೇಳೂರು ಕಲ್ಯಾಣ ಮಂಟಪದಲ್ಲಿ ಕ್ವಾರೆಂಟೈನ್‍ನಲ್ಲಿದ್ದ ದೆಹಲಿ ಮೂಲದ ಕ್ರೇನ್ ಆಟರೇಟರ್ ಎತ್ತಿನಹೊಳೆ ಯೋಜನೆ ಕೆಲಸಕ್ಕೆ ಬರುವಾಗ್ಗೆ ಕೊರೋನಾ ವೈರಸ್ ಅಂಟಿಸಿಕೊಂಡು ಬಂದಿದ್ದು ತಾಲ್ಲೂಕಿಗೆ ಪಾದಾರ್ಪಣೆ ಎಂದೆನಿಸಿತು. ಈತನ ಸಂಪರ್ಕಕ್ಕೆ ಬಂದವರ ಸಂಖ್ಯೆ ಕಡಿಮೆ ಎನಿಸಿದ ಹಿನ್ನಲೆ ಜನರಲ್ಲಿ ಈ ಪ್ರಕರಣ ಬಗ್ಗೆ ಹೆಚ್ಚಿನ ಗಮನ ಸಿಗಿಲಿಲ್ಲ. ನಂತರ ಗುಬ್ಬಿ ಸಮೀಪದ ಕಿಟ್ಟದಕುಪ್ಪೆ ಗ್ರಾಮದಲ್ಲಿ ಕಾಣಿಸಿಕೊಂಡ ಅಡುಗೆ ತಯಾರಕನಲ್ಲಿನ ವೈರಸ್ ಪಾಸಿಟೀವ್ ಇಡೀ ತಾಲ್ಲೂಕಿಗೆ ಬೆಚ್ಚಿಬೀಳಿಸಿತ್ತು. ಮೂರು ದಿನದಲ್ಲೇ ಮೂರನೇ ಪ್ರಕರಣ ಅಂತಾಪುರ ಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಕಾಣಿಸಿರುವುದು ಸಮುದಾಯ ಹರಡುವಿಕೆಗೆ ಸಾಕ್ಷಿಯಾಗುತ್ತಿದೆ ಎಂಬ ಆತಂಕ ಮೂಡಿಸಿದೆ.      …

ಮುಂದೆ ಓದಿ...

ಗುಬ್ಬಿ ಕಸಬ ಹೋಬಳಿಯಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಕರೆಕಟ್ಟೆಗಳ ನಾಶ!!

ಗುಬ್ಬಿ:         ಮೈನಿಂಗ್ ನಡೆಯುವ ಸ್ಥಳಗಳಿಗಿಂತ ಭಿನ್ನವಾಗಿ ಕೆರೆಕಟ್ಟೆಗಳಲ್ಲಿ ಮಣ್ಣು ತೆಗೆಯುವ ಕೆಲಸ ನಿರಂತರವಾಗಿ ತಾಲ್ಲೂಕಿನ ಕಸಬ ಹೋಬಳಿಯಲ್ಲಿ ಹೆಚ್ಚಾಗಿ ನಡೆದಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೆರೆಕಟ್ಟೆಗಳಲ್ಲಿ ನಿಯಮ ಮೀರಿ ಮಣ್ಣು ಸಾಗಿಸಿರುವುದು ಪ್ರಕೃತಿಗೆ ವಿರುದ್ಧವಾದದ್ಧು ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.       ಗುಬ್ಬಿ ಪಟ್ಟಣದ ಹೊರವಲಯದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ಫ್ಲೈಓವರ್ ಸೇತುವೆಗಳ ನಿರ್ಮಾಣ ಮಾಡಬೇಕಾಗಿರುವ ಕಾರಣ ಮಣ್ಣಿನ ಅಗತ್ಯತೆ ಇತ್ತು. ಆದರೆ ಮಣ್ಣು ಸಮೀಪದಲ್ಲೇ ಹುಡುಕಲು ಮುಂದಾದ ಗುತ್ತಿಗೆದಾರರು ರಸ್ತೆ ನಿರ್ಮಾಣದ ಅಕ್ಕಪಕ್ಕದ ಕೆರೆಕಟ್ಟೆ, ಗೋಮಾಳ, ಗೋಕಟ್ಟೆ, ಅರಣ್ಯ ಪ್ರದೇಶ ಸ್ಥಳಗಳ ಜತೆಗೆ ರೈತರ ಜಮೀನಿನಲ್ಲಿ ಸಹ ಮಣ್ಣು ಸಾಗಿಸಲು ಆರಂಭಿಸಿದರು. ದಿನ ಕಳೆದಂತೆ ಕೆರೆಗಳ ಆಕೃತಿಯೇ ವಿಚಿತ್ರವಾಗಿದ್ದು ಕೆಲ ಪ್ರಜ್ಞಾವಂತ ರೈತರಲ್ಲಿ ಆತಂಕ ತಂದಿದೆ. ಸರ್ಕಾರದ ನಿಯಮ ಪ್ರಕಾರ ನಾಲ್ಕೈದು ಅಡಿಗಳಿಂತ ಆಳ…

ಮುಂದೆ ಓದಿ...

ತುಮಕೂರು : SSLC ಪರೀಕ್ಷಾ ಕೇಂದ್ರಗಳಿಗೆ ಮೇಯರ್ ಭೇಟಿ!

ತುಮಕೂರು:        ಜೂನ್-25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಪ್ರಾರಂಭವಾಗಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಮಾಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.       ತುಮಕೂರು ಮಹಾನಗರ ಪಾಲಿಕೆಗೆ ಒಳಪಡುವ ಪರೀಕ್ಷಾ ಕೇಂದ್ರಗಳಿಗೆ ಮಹಾನಗರ ಪಾಲಿಕೆಯ ಮೇಯರ್ ಭೇಟಿ ನೀಡಿ ಪಾಲಿಕೆಯ ವತಿಯಿಂದ ಶಾಲಾ ಆವರಣವನ್ನು ಕೊಠಡಿಗಳನ್ನು ವೀಕ್ಷಿಸಿ ಸಾಹಿತ್ಯ ಮಾಡಿಸಿದರು ಈ ವೇಳೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕಾಮಾಕ್ಷಿ ಜೂನ್ 25ರಿಂದ ಎಸ್‍ಎಸ್‍ಎಲ್‍ಸಿಪರೀಕ್ಷೆ ಗಳು ಪ್ರಾರಂಭವಾಗುತ್ತಿದೆ ತುಮಕೂರಿನಲ್ಲಿ 33 ಪರೀಕ್ಷಾ ಕೇಂದ್ರಗಳು ಇವೆ ಎಂದು ತಿಳಿಸಿದರು.      ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು  ಪೋಷಕರಲ್ಲಿ ಸಾರ್ವಜನಿಕರಲ್ಲಿ ಮನವಿ ಎಂದರೆ ಎಲ್ಲರೂ ಕೈಜೋಡಿಸುವ ಮೂಲಕ ಸರಾಗವಾಗಿ ನಡೆಯಲು ಸಹಕರಿಸಬೇಕೆಂದು ಕೋರಿದರು ಪೋಷಕರು ತಮ್ಮ ಮಕ್ಕಳ ಆತಂಕಪಡುವ ಅಗತ್ಯವಿಲ್ಲ ನಿಮ್ಮ ಮಕ್ಕಳು…

ಮುಂದೆ ಓದಿ...