ಕಳಪೆ ವಿದ್ಯುತ್ ಕಂಬ : ದೂರು ನೀಡಿದರು ಕ್ಯಾರೆ ಎನ್ನದ ಅಧಿಕಾರಿಗಳು

ಚಿಕ್ಕನಾಯಕನಹಳ್ಳಿ:       ರಸ್ತೆ ಮಧ್ಯದಲ್ಲಿರುವ ವಿದ್ಯುತ್‍ಕಂಬ ತೆಗೆಸದೆ ಕಳಪೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಘಟನೆ ತಾಲ್ಲೂಕಿನ ನಿರುವಗಲ್ ಗ್ರಾಮದಲ್ಲಿ ನಡೆದಿದೆ.       ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಪಂಚಾಯಿತಿ ನಿರುವಗಲ್ ಗ್ರಾಮದಲ್ಲಿ ಸರ್ಕಾರದ ಗ್ರಾಮವಿಕಾಸ ಯೋಜನೆಯಡಿ ರಸ್ತೆಕಾಮಗಾರಿ ನಡೆದಿದೆ. ಆದರೆ ಈ ರಸ್ತೆಕಾಮಗಾರಿ ಅತ್ಯಂತ ಕಳಪೆಮಟ್ಟದಲ್ಲಿ ಮಾಡಲಾಗುತ್ತಿದೆ. ಈ ಕಾಂಕ್ರೀಟ್ ರಸ್ತೆಗೆ ಸಿಮೆಂಟ್ ಬಣ್ಣದ ಜಲ್ಲಿಯ ಪುಡಿಯನ್ನು(ಎಂಸ್ಯಾಂಡ್) ಸಿಮೆಂಟ್‍ನೊಂದಿಗೆ ಹೆಚ್ಚು ಪ್ರಮಾಣದಲ್ಲಿ ಸೇರಿಸಿ ಮಾಡಲಾಗುತ್ತಿದೆ. ರಸ್ತೆಯ ನಡುಮಧ್ಯದಲ್ಲಿ ವಿದ್ಯತ್‍ಕಂಬವಿದ್ದರೂ ಅದನ್ನು ಸ್ಥಳಾಂತರಿಸದೆ ಅದನ್ನು ಹಾಗೆಯೇ ಉಳಿಸಿ ರಸ್ತೆ ಮಾಡುತ್ತಿದ್ದಾರೆ.       ಈ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಸಂಬಧಿಸಿದ ಇಂಜಿನಿಯರ್ ನಿಲ್ರ್ಯಕ್ಷಧೋರಣೆ ತೋರಿದ್ದಾರೆ. ನಿರುವಗಲ್ ಗ್ರಾಮವು ಬಸ್‍ಸೌಕರ್ಯವಿಲ್ಲದ ಹಿಂದುಳಿದ ಕುಗ್ರಾಮವಾಗಿದ್ದು, ಸುಶಿಕ್ಷಿತ ಮಂದಿ ಇಂತಹ ಕಳಪೆ ಕಾಮಗಾರಿಗಳನ್ನು ನಿರಕ್ಷರಕುಕ್ಷಿಗಳಿರುವ ಕುಗ್ರಾಮದಲ್ಲಿ ನಿರ್ಭಯದಿಂದ ನಡೆಸಿ ಬಿಲ್ಲು ಪಡೆಯುವ ಧಾವಂತದಲ್ಲಿದ್ದಾರೆ.…

ಮುಂದೆ ಓದಿ...

ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ : ಡಿಸಿಎಂ

ಮಧುಗಿರಿ:       ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರ ಪ್ರಕೃತಿ ವಿಕೋಪಗಳು ಕಾಡುತ್ತಿದ್ದು, ಸಾರ್ವಜನಿಕ ಆಸ್ತಿ ಸೇರಿದಂತೆ ಸುಮಾರು 35 ಸಾವಿರ ಕೋಟಿ ನಷ್ಟವಾಗಿದ್ದು, ಇದರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.        ಶುಕ್ರವಾರ ಪಾವಗಡಕ್ಕೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಹಾವಳಿಯಿಂದಾಗಿ ರಾಜ್ಯಕ್ಕೆ ಬಹಳಷ್ಟು ತೊಂದರೆಯುಂಟಾಗಿದ್ದು 2020-21 ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಇವುಗಳ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿ ಕೆಲಸ ಕೈಗೆತ್ತಿಕೊಂಡಿದ್ದು, ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಮಾರ್ಚ್‍ನಲ್ಲಿ ಕರೊನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಸಮಸ್ಯೆಗೆ ಸಿಲುಕಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆಯಾಗಿದೆ. ಲಾಕ್‍ಡೌನ್ ವೇಳೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿರುವುದರಿಂದ ಹೊರ…

ಮುಂದೆ ಓದಿ...

ನಮ್ಮ ಸರ್ಕಾರದ ಮುಖ್ಯ ಆಧ್ಯತೆ ಶಿಕ್ಷಣ : ಸಚಿವ

ಪಾವಗಡ:       ಸಮಾಜಕಲ್ಯಾಣ ಇಲಾಖೆಯಿಂದ ಒಟ್ಟು 88 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಅಂಬೇಡ್ಕರ್ ಭವನ, ಸರ್ಕಾರಿ ಬಾಲಕರ ವಸತಿ ನಿಲಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವ ಗೋವಿಂದ ಕಾರಜೋಳ ಹೇಳಿದರು.       ಶುಕ್ರವಾರ ಪಾವಗಡದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರೂ ಅದ ಗೋವಿಂದ ಕಾರಜೋಳ ನಮ್ಮ ಬಿ.ಜೆ.ಪಿ. ಸರ್ಕಾರದ ಉದ್ದೇಶ ಮಕ್ಕಳಿಗೆ ಶಿಕ್ಷಣ ಕೊಡುವುದಾಗಿದೆ, ತಾಲ್ಲೂಕಿನಲ್ಲಿ ವಸತಿನಿಲಯಗಳು ಪ್ರಾರಂಭವಾಗಿದ್ದರಿಂದ 1600 ಮಕ್ಕಳಿಗೆ ಅನುಕೂಲವಾಗುತ್ತಿದೆ. ಸರ್ಕಾರದ ಮುಖ್ಯ ಆಧ್ಯತೆ ಶಿಕ್ಷಣ. ಬಜೆಟ್‍ನಲ್ಲಿ ಬಡವರ ಪರ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ. 559 ಕೋಟಿ ಅನುದಾನವನ್ನು ಎಸ್.ಸಿ/ಎಸ್.ಟಿ. ಜನಾಂಗದ ಅಭಿವೃದ್ಧಿಗಾಗಿ ಹಾಗೂ 25.388 ಕೋಟಿ ಖರ್ಚು ಮಾಡಲಾಗಿದೆ.    …

ಮುಂದೆ ಓದಿ...

ಮಾನವನ ದುರಾಸೆಗೆ ಪ್ರಕೃತಿ ಕಲುಷಿತವಾಗುತ್ತಿದೆ : ಸಚಿವ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ:       ಮಾಲಿನ್ಯ ನಿಯಂತ್ರಿಸಿ ಜೀವ ವೈವಿಧ್ಯ ಉಳಿಸಿ ಆಂದೋಲನಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.       ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ವಿಸ್ವ ಪರಿಸರ ದಿನದ ಅಂಗವಾಗಿ ಅರಣ್ಯ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರಕೃತಿ ಉದಯದ ಸಾವಿರಾರು ವರ್ಷದ ನಂತರ ಸೃಷ್ಠಿಯಾದ ಮಾನವನ ದುರಾಸೆಗೆ ಇಂದು ಇಡೀ ಪರಿಸರ ಕಲುಷಿತಗೊಂಡಿದೆ. ಶುದ್ದ ಜಲ,ಗಾಳಿ ಹಾಗೂ ಆಹಾರಕ್ಕಾಗಿ ನಾವು ಪರಿಸರವನ್ನೆ ಅವಲಂಭಿಸುವುದು ಅನಿವಾರ್ಯವೆನಿಸಿದೆ.       ಈ ನಿಟ್ಟಿನಲ್ಲಿ ಪರಿಸರದ ಸಮತೋಲನಕ್ಕೆ ಅರಣ್ಯೀಕರಣವಾಗಲೇ ಬೇಕಿದೆ. ಇದರ ಅಂಗವಾಗಿ ಮಾಲಿನ್ಯ ನಿಯಂತ್ರಿಸಿ ಜೀವ ವೈವಿಧ್ಯ ಉಳಿಸಿ ಆಂದೋಲನ ರಾಜ್ಯವ್ಯಾಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.       ವಲಯ ಅರಣ್ಯಾಧಿಕಾರಿ ಸುನೀಲ್ ಮಾತನಾಡಿ ಅರಣ್ಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸುವ ಸಲುವಾಗಿ…

ಮುಂದೆ ಓದಿ...