ಪಿಯುಸಿ ಪರೀಕ್ಷೆ ಬರೆಯಲು ಹೋದ ಅಪ್ರಾಪ್ತ ಯುವತಿ ಕಾಣೆ!!

ಮಧುಗಿರಿ :       ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಬರುತ್ತೇನೆ ಎಂದು ಪರೀಕ್ಷೆ ಬರೆಯಲು ಹೋದ ಅಪ್ರಾಪ್ತ ಯುವತಿ ಕಾಣೆಯಾಗಿರುವ ತಡವಾಗಿ ಪ್ರಕರಣ ವರದಿಯಾಗಿದೆ.       ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿ.ಜಿ. ಲಾವಣ್ಯ ಕಾಣೆಯಾದ ವಿದ್ಯಾರ್ಥಿನಿ. ತಾಲೂಕಿನ ಪುರವರ ಹೋಬಳಿಯ ಬಡಕನಹಳ್ಳಿ ಗ್ರಾಮದ ಈಕೆ ಜೂ. 18 ರಂದು ಬೆಳಿಗ್ಗೆ 08-30 ಗಂಟೆಗೆ ಮಧುಗಿರಿ ಪಟ್ಟಣದಲ್ಲಿ ನಡೆಯುವ ಪಿಯುಸಿ ಪರೀಕ್ಷೆಗೆ ಹೋಗಿ ಬರುವುದಾಗಿ ಹೇಳಿ ಮಧುಗಿರಿಗೆ ಆಟೋರಿಕ್ಷಾದಲ್ಲಿ ಹೋದವಳು, ಆ ದಿನ ರಾತ್ರಿ ಸುಮಾರು 8 ಗಂಟೆಯಾದರೂ ಮನೆಗೆ ವಾಪಾಸ್ಸಾಗಿಲ್ಲ.       ತದ ನಂತರ ನಮ್ಮ ಸಂಬಂದಿಕರ ಮನೆಗಳಲ್ಲಿ ಹುಡುಕಿದರು ಸಹ ನನ್ನ ಮಗಳು ಸಿಕ್ಕದೆ ಇರುವುದರಿಂದ ಆದ್ದರಿಂದ ತಡವಾಗಿ ಬಂದು ದೂರು ನೀಡಿರುತ್ತೇನೆ , ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಹಚ್ಚಿ ಅನುಕೂಲ…

ಮುಂದೆ ಓದಿ...

ಗುಬ್ಬಿ : ಆಹಾರ ಹುಡುಕಿ ಬಂದಿದ್ದ 6 ವರ್ಷದ ಚಿರತೆ ಸೆರೆ!!

ಗುಬ್ಬಿ :       ಆಹಾರ ಹುಡುಕಿ ಬಂದಿದ್ದ ಆರು ವರ್ಷದ ಚಿರತೆ ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾದ ಘಟನೆ ಶನಿವಾರ ಮುಂಜಾನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.       ನಂದಿಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಾಯಿಗಳನ್ನು ಬೇಟೆಯಾಡುತ್ತಿದ್ದ ಆರು ವರ್ಷದ ಗಂಡು ಚಿರತೆಯ ಉಪಟಳಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಎರಡು ದಿನಗಳ ಹಿಂದೆ ರೈತ ಸದಾಶಿವಯ್ಯ ಎಂಬುವವರ ಸಾಕು ನಾಯಿ ಬೇಟೆಯಾಡಿದ್ದ ಚಿರತೆ ಮತ್ತೆ ಆಹಾರ ಹುಡುಕಿ ಬರುವ ಖಚಿತತೆಯಲ್ಲಿ ಅರಣ್ಯ ಇಲಾಖೆ ಬೋನ್ ಅಳವಡಿಸಿತ್ತು.       ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಂಪೂರ್ಣ ಸಾಥ್ ನೀಡಿದ ಗ್ರಾಮಸ್ಥರು ಗ್ರಾಮದ ಹೊರವಲಯ ಕೊಡಗೀ ಜಮೀನಿನಲ್ಲಿ ಬೋನ್ ಅವಳಡಿಸಲಾಯಿತು. ಮುಂಜಾನೆ ವೇಳೆಗೆ ಬೋನಿನಲ್ಲಿ ಸೆರೆಯಾದ ಚಿರತೆ ಹಸಿವಿನಿಂದ ಕಂಗಾಲಾಗಿತ್ತು. ಚಿರತೆ ನೋಡಲು ಧಾವಿಸಿದ ನೂರಾರು ಗ್ರಾಮಸ್ಥರು ಕೊಂಚ…

ಮುಂದೆ ಓದಿ...

ಪಾವಗಡ : ಕೇಳುವರಿಲ್ಲ ಖಾಸಗಿ ಸಿಬ್ಬಂದಿ ವರ್ಗದವರ ಗೋಳು!!

ಪಾವಗಡ:       ಪಾವಗಡ ಕಳೆದ ನಾಲ್ಕು ತಿಂಗಳಿಂದ ಜನರನ್ನು ಸಾಗಿಸುತ್ತಿದ್ದ ಖಾಸಗಿ ಬಸ್‍ಗಳು ತುಕ್ಕು ಹಿಡಿಯುತ್ತಿರುವುದು ಒಂದು ಕಡೆ ಅದರೆ ಬೀದಿಗೆ ಬಿಳುವ ಹಂತದಲ್ಲಿ ಇರುವ ಖಾಸಗಿ ಬಸ್‍ಗಳನ್ನೆ ನಂಬಿ ಜೀವಿಸುತ್ತಿದ್ದ ಅದೆಷ್ಟೋ ಕುಟುಂಬಗಳು.       ಕಳೆದ ನಾಲ್ಕು ತಿಂಗಳಿಂದ ಕೂರೊನ ಭೀತಿಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಶವೆ ಕಂಗಾಲಾಗಿದೆ. ಇದರ ಮಧ್ಯದಲ್ಲಿ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿದವೂ ಎಂಬುದು ಲೆಕ್ಕಸಿಗದ ರೀತಿಯಲ್ಲಿ ನಾವೂ ಕಾಣಬಹುದಾಗಿದೆ. ಅದರೆ ದಿನನಿತ್ಯ ದುಡಿದು ತಿನ್ನುತ್ತಿದ್ದ ಜನರ ಪಾಡು ಹೇಳ ತೀರದಾಗಿದ್ದು ಒಂದು ಕಡೇ ಅದರೆ. ಖಾಸಗಿ ಬಸ್‍ಗಳನ್ನು ನಂಬಿ ಜೀವನ ಸಾಗಿಸುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್, ಏಜೆಂಟ್‍ರ್‍ಗಳು ಹಾಗೂ ಕ್ಲೀನರ್ ಗಳ ಪಾಡು ಹೇಳುತೀರದಾಗಿದೆ. ಇಂದು ದಿನ ಕೂಲಿ ಕೇಲಸವು ಸಹ ಸಿಗದ ಪರಿಸ್ಥಿತಿಯಲ್ಲಿ ಇರುವ ಜನರ ರಕ್ಷಣೆಗೆ ಸರ್ಕಾರ ಇದೆ ಎಂಬುದಾಗಿ ಹೇಳುತ್ತಿರುವ ಜನಪ್ರತಿನಿಧಿಗಳು…

ಮುಂದೆ ಓದಿ...

ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಳ್ಳಿ : ಶಾಸಕ

ತುಮಕೂರು:       ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಧ್ಯೇಯ, ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.        ನ್ಯಾಯ, ನೀತಿ, ನಿಯತ್ತು, ತ್ಯಾಗ-ಬಲಿದಾನಗಳಿಗೆ ಇನ್ನೊಂದು ಹೆಸರೇ ಕೆಂಪೇಗೌಡರು. ನಾಡಿನ ಕಲ್ಯಾಣಕ್ಕಾಗಿ ಶ್ರಮಿಸಿದ ಇಂಥ ಮಹಾನುಭಾವರ ಆದರ್ಶ ಅನುಕರಣೀಯ ಎಂದರು.       ನಗರದ ಬಿಜಿಎಸ್ ವೃತ್ತದಲ್ಲಿ ನಡೆದ 510ನೇ ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.       ಕೆಂಪೇಗೌಡರಂತ ಮಹಾನುಭಾವರ ಧ್ಯೇಯ, ಆದರ್ಶವನ್ನು ನಮ್ಮ ತನು, ಮನ, ಮತಿಗಳಲ್ಲಿ ತುಂಬಿಕೊಂಡಾಗ ಮಾತ್ರ ಅವರ ಜಯಂತಿ, ಜನ್ಮದಿನಾಚರಣೆಗೆ ಅರ್ಥ ಬರುತ್ತದೆ ಎಂದರು.       ಪ್ರತಿಯೊಂದು ಕೆಂಪೇಗೌಡರ ಜಯಂತಿ, ಜನ್ಮದಿನಕ್ಕೆ ಹತ್ತು ಹೊಸ ಕೆಂಪೇಗೌಡರು ಹುಟ್ಟಿಕೊಳ್ಳಬೇಕು. ಆಗ ಮಾತ್ರ ಕೆಂಪೇಗೌಡರಿಗೆ ಸಂತೋಷವಾಗುತ್ತದೆ.…

ಮುಂದೆ ಓದಿ...