ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು:       ಸ್ಯಾಂಡಲ್‍ವುಡ್‍ನ ಖ್ಯಾತ ಹಿರಿಯ ನಟ ಲೋಕನಾಥ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.        ಲೋಕನಾಥ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದು, 5 ದಶಕಗಳ ಕಾಲ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಲೋಕನಾಥ್ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.       ಮಧ್ಯಾಹ್ನ 12 ರಿಂದ 2.30ರವರೆಗೂ ಅಂತಿಮ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.       ದೇವಾಂಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು…

ಮುಂದೆ ಓದಿ...

ನಾಳೆಯಿಂದ ಕೆಲಸ ಮಾಡಲ್ಲ ವಾಟ್ಸಾಪ್

      ಪ್ರಪಂಚದ ಅತ್ಯಂತ ಜನಪ್ರಿಯ ಸಂದೇಶ ರವಾನೆ ವೇದಿಕೆ ವಾಟ್ಸಾಪ್ ಡಿಸೆಂಬರ್ 31 ರ ನಂತ್ರ ಕೆಲ ಮೊಬೈಲ್ ಗಳಲ್ಲಿ ತನ್ನ ಸೇವೆ ನಿಲ್ಲಿಸಲಿದೆ. ಫೇಸ್ಬುಕ್ ಸ್ವಾಮ್ಯದ ವಾಟ್ಸಾಪ್ ಈಗಾಗಲೇ ಈ ಬಗ್ಗೆ ಘೋಷಣೆ ಮಾಡಿದೆ. ಹಿಂದಿನ ವರ್ಷ ಕೂಡ ವಾಟ್ಸಾಪ್ ಕೆಲ ಫೋನ್ ಗಳಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿತ್ತು.      ವಿಂಡೋಸ್ ಫೋನ್ 8.0, ಬ್ಲ್ಯಾಕ್ಬೆರಿ ಒಎಸ್, ಬ್ಲ್ಯಾಕ್ಬೆರಿ 10 ನಲ್ಲಿ ವಾಟ್ಸಾಪ್ ಬರ್ತಿಲ್ಲ. ಡಿಸೆಂಬರ್ 31, 2017 ರ ನಂತ್ರ ಈ ಮೊಬೈಲ್ ಗೆ ಸೇವೆ ನೀಡುವುದನ್ನು ವಾಟ್ಸಾಪ್ ನಿಲ್ಲಿಸಿತ್ತು. ಈಗ ನೋಕಿಯಾದ ಎಸ್ 40 ಸರದಿ. ಡಿಸೆಂಬರ್ 31, 2018 ರ ನಂತ್ರ ಈ ಫೋನ್ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಿಲ್ಲ. ಆಂಡ್ರಾಯ್ಡ್ 2. 3. 7 ಜಿಂಜರ್ಬ್ರೆಡ್ ಸ್ಮಾರ್ಟ್ಫೋನ್ ಹಾಗೂ ಐಫೋನ್ ಚಾಲನೆ ಮಾಡ್ತಿರುವ ಐಒಎಸ್ 7…

ಮುಂದೆ ಓದಿ...

ಶ್ರೀ ಶಿವಕುಮಾರಸ್ವಾಮೀಜಿ ಆರೋಗ್ಯ ವಿಚಾರಿಸಿದ ಬಿಎಸ್ ​ವೈ

ತುಮಕೂರು :       ಶ್ರೀ ಶಿವಕುಮಾರಸ್ವಾಮೀಜಿ ಅನಾರೋಗ್ಯದ ಹಿನ್ನೆಲೆ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದರು.       ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಾನು ಕೂಡ ಸ್ವಾಮೀಜಿ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದೆ. ಪ್ರಸಾದ ಮಾಡಿಕೊಂಡು ಹೋಗಿ ಎಂದು ಸ್ವಾಮೀಜಿ ಕೈ ಸನ್ನೆ ಮಾಡಿದರು ಎಂದಿರುವ ಅವರು ಗಾಳಿ ಸುದ್ದಿಗೆ ಭಕ್ತರು ಕಿವಿಗೊಡಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು.       ಒಂದು ವಾರದಲ್ಲಿ ಸಂಪೂರ್ಣವಾಗಿ ಸ್ವಾಮೀಜಿ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಇದೇ ವೇಳೆ ತಿಳಿಸಿದರು. ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.

ಮುಂದೆ ಓದಿ...

ಜ.5,6: ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ-ಸಿಇಓ

 ತುಮಕೂರು:       ಕಳೆದ ವರ್ಷದಂತೆ ಈ ವರ್ಷವೂ ಜನವರಿ 5 ಹಾಗೂ 6ರಂದು ನಗರದ ಗಾಜಿನಮನೆಯಲ್ಲಿ “ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.      ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಜನವರಿ 18ರಂದು ರಾಜ್ಯ ಮಟ್ಟದ ಮೇಳ ನಡೆಯುವುದರಿಂದ ಅದಕ್ಕೂ ಮುನ್ನ ಜಿಲ್ಲೆಯಲ್ಲಿ ಈ ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೇಳದಲ್ಲಿ ರೈತರು ಬೆಳೆದ ವಿವಿಧ ಬಗೆಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುವುದಲ್ಲದೆ, ಸಾರ್ವಜನಿಕರಿಗೆ ಸಿರಿಧಾನ್ಯಗಳ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಲಾಗುವುದೆಂದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಜಿಲ್ಲೆಯ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆಯಲಿರುವ ಈ ಮೇಳಕ್ಕೆ…

ಮುಂದೆ ಓದಿ...

ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ನೀತಿಯಿಂದ ನಿರ್ಮಾಣ ವಲಯಕ್ಕೆ ಪೆಟ್ಟು – ಮಹಾಂತೇಶ್

      ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ನೀತಿಯನ್ನು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ.       ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಕೊರಟಗೆರೆ ತಾಲೂಕು ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯ ಅಜ್ಜಿಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಕೃಷಿಯ ನಂತರ ಉದ್ಯೋಗ ಸೃಷ್ಟಿಸಿದ್ದ ನಿರ್ಮಾಣ ವಲಯ ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ನೀತಿಯನ್ನು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಇದರಿಂದ ಆರ್ಥಿಕ ಸಂಚಲನವು ಸ್ಥಗಿತಗೊಂಡು ಕೃಷಿ, ವ್ಯಾಪಾರ ಮತ್ತು ಉದ್ಯೋಗದ ಮೇಲೆ ಬಾರೀ ಹಿನ್ನಡೆಗೆ ಕಾರಣವಾಗಿ ಕಾರ್ಮಿಕರ…

ಮುಂದೆ ಓದಿ...

ಜ.2ರಿಂದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ

 ತುಮಕೂರು:       ಕ್ಷಯರೋಗದ ಬಗ್ಗೆ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾದ್ಯಂತ ಜನವರಿ 2 ರಿಂದ 12ರವರೆಗೆ “ಸಕ್ರಿಯ ರೋಗ ಪತ್ತೆ ಆಂದೋಲನ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರ ಡಾ: ಸನತ್ ತಿಳಿಸಿದ್ದಾರೆ.       ಈ ಆಂದೋಲನದಲ್ಲಿ ನಿಯೋಜಿತ ತಂಡವು ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಮನೆಗಳಿಗೆ ಭೇಟಿ ನೀಡಿ ರೋಗದ ಜನಜಾಗೃತಿ ಮೂಡಿಸಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಫ ಸಂಗ್ರಹಣೆ ಮಾಡಿ ಆ ದಿನವೇ ಕಫ ಪರೀಕ್ಷೆ ಮಾಡಲಾಗುವುದು. ಕಫದಲ್ಲಿ ಕ್ರಿಮಿಗಳು ಪತ್ತೆಯಾದಲ್ಲಿ ಅಂದಿನಿಂದಲೇ ಚಿಕಿತ್ಸೆ ಪ್ರಾರಂಭಿಸಲಾಗುವುದು. ಭಿತ್ತಿಪತ್ರ ಬಿಡುಗಡೆ:-       ಆಂದೋಲನದ ಪ್ರಯುಕ್ತ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಇಂದು ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಬಿ.ಆರ್.ಚಂದ್ರಿಕಾ,…

ಮುಂದೆ ಓದಿ...